Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜ.14 ರಂದು ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 26 ನೇ ವರ್ಷದ ಲಕ್ಷ ದೀಪೋತ್ಸವ

---Advertisement---

ಸುದ್ದಿಒನ್, ಚಿತ್ರದುರ್ಗ, ಜನವರಿ. 09 : ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್( ರಿ) ಮೆದೇಹಳ್ಳಿ ರಸ್ತೆ, ಚಿತ್ರದುರ್ಗ ಇವರ ವತಿಯಿಂದ 26 ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮವು ಜನವರಿ. 14 ರ ಬುಧವಾರ ಸಂಜೆ 5:00 ಘಂಟೆಗೆ ನೆರವೇರಲಿದೆ.

ಈ ಸಮಾರಂಭದ ಉದ್ಘಾಟನೆಯನ್ನು ಗೋವಿಂದ ಕಾರಜೋಳ,ಮಾನ್ಯ ಲೋಕಸಭಾ ಸದಸ್ಯರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ್ ಕುಮಾರ್ ಅಧ್ಯಕ್ಷರು ಕರ್ನಾಟಕ ಅಯ್ಯಪ್ಪ ಸ್ವಾಮಿ ಅನ್ನ ಪ್ರಸಾದ ಸಮಿತಿ ನಿರ್ವಹಿಸುವರು. ಈ ದೀಪೋತ್ಸವದ ಉದ್ಘಾಟನೆಯನ್ನು ಕೆ ಸಿ ವೀರೇಂದ್ರ (ಪಪ್ಪಿ ) ಶಾಸಕರು ಚಿತ್ರದುರ್ಗ ಹಾಗೂ ಕೆ ಎಸ್ ನವೀನ್ ವಿಧಾನ ಪರಿಷತ್ ಸದಸ್ಯರು ನೆರವೇರಿಸುವರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಲಿಂಗಾರೆಡ್ಡಿ ಎಸ್ ಆರ್ ಎಸ್ ವಿದ್ಯಾಸಂಸ್ಥೆ ಟಿ ಮಹಾಂತೇಶ ನಿರ್ದೇಶಕರು, ಡಿ ಸಿ ಸಿ ಬ್ಯಾಂಕ್, ಉದಯ್ ಶೆಟ್ಟಿ ವರ್ತಕರು, ಡಾII ಸಿದ್ದಾರ್ಥ್ ವರ್ತಕರು, ಅರುಣ್ ಕುಮಾರ್ ಐಶ್ವರ್ಯ ಗ್ರೂಪ್, ಎಚ್ ಎಮ್ ದ್ಯಾಮಣ್ಣ ನಿರ್ದೇಶಕರು ಡಿ ಸಿ ಸಿ ಬ್ಯಾಂಕ್, ನಿರಂಜನಮೂರ್ತಿ, ಅಧ್ಯಕ್ಷರು, ಮೆದೆಹಳ್ಳಿ ಗ್ರಾಮ ಪಂಚಾಯಿತಿ ,ಸುಭಾಷ್ ಬಾಬು ಇಂಜಿನಿಯರ್ ಶ್ರೀ ಟಿ ಬದ್ರಿನಾಥ್, ಮಾಜಿ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ, ಸುರೇಶ್ ಬಾಬು ಕಂಠೇಶ್ವರ ಏಜೆನ್ಸಿ, ದೇವಸ್ಥಾನದ ಸಂಪೂರ್ಣ ಹೂವಿನ ಅಲಂಕಾರ ಸೇವಕರ್ತರು ಶ್ರೀಮತಿ ರಾಜೇಶ್ವರಿ ಉದಯ ಶೆಟ್ಟಿ ಹಾಗೂ ಶ್ರೀಮತಿ ಪದ್ಮಜಾ ಅಶೋಕ್ ಕುಮಾರ್( ಜಿಮ್ಮಿ) ,ಸಂಜೆ 5-30 ಕ್ಕೆ ಸುರಸಾರವ ಭಕ್ತಿ ಭಾವಾಮೃತ ಸಂಗೀತ ಕಾರ್ಯಕ್ರಮ ಖ್ಯಾತ ಹಿನ್ನೆಲೆ ಗಾಯಕರು ಯಶವಂತ್ ಮಂಗಳೂರು ನಿತಿನ್ ರಾಜ ರಾಮ ಶಾಸ್ತ್ರಿ ಮೈಸೂರು. ಹಾಗೂ ಕೃಪಾ ಎಸ್ ಬೆಂಗಳೂರು. ಇವರು ಬಜನಾ ಕಾರ್ಯಕ್ರಮ ನಡೆಸಿಕೊಡುವವರು.

ದೇವಸ್ಥಾನದ ಸಂಪೂರ್ಣ ಪ್ರಸಾದದ ಸೇವಕರ್ತರು ಶ್ರೀಮತಿ ರಾಜೇಶ್ವರಿ ಉದಯ್ ಶೆಟ್ಟಿ . ಮತ್ತು ಭಕ್ತಿ ಕುಸುಮಾಂಜಲಿಯ ಸೇವಕರ್ತರು ಶ್ರೀ ಪ್ರವೀಣ್ ಸುವರ್ಣ ಮತ್ತು ಸ್ನೇಹಿತರು ಹಾಗೂ ಶ್ರೀಮತಿ ಶ್ರೀ ಸುಶಾಂತ್ ಮತ್ತು ಕುಟುಂಬದವರು.13-1-2026 ಮಂಗಳವಾರ ಸಂಜೆ  6 ಗಂಟೆಗೆ ಬೆಳ್ಳಿರಥದ ಸಾರೋಟಿಯಲ್ಲಿ ಬೆಳ್ಳಿ ಪಲ್ಲಕ್ಕಿ ಹಾಗೂ ನಾದಸ್ವರ ಛತ್ರಿ, ಚಮರ, ಪಟಾಕಿ ಸಿಡಿಸುವ ಹಾಗೂ ಇರುಮುಡಿ ಹೊತ್ತ ನೂರಾರು ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಜೊತೆಗೆ ಸ್ವಾಮಿ ನೀಲಕಂಠೇಶ್ವರ ದೇವಸ್ಥಾನ ದ ಪ್ರಧಾನ ಅರ್ಚಕರಾದ ಫಕೀರಯ್ಯ ಸ್ವಾಮಿ ರವರು ವಜ್ರಭರಣ ಪೂಜೆ ಮಾಡುವ ಮುಖಾಂತರ ಮೆರವಣಿಗೆ ಪ್ರಾರಂಭವಾಗಿ ವಾಸವಿ ಮಹಲ್ ದೇವಸ್ಥಾನದ ಮುಂಭಾಗದಿಂದ ಮೆದಿಹಳ್ಳಿ ರಸ್ತೆ ಮುಖಾಂತರ ದೇವಸ್ಥಾನ ತಲುಪುವುದು ಈ ವಜ್ರಭರಣ ದಾನಿಗಳು  ಭುವನ್ ಎಸ್ ಮುಲ್ಕ ಹಾಗೂ  ಪ್ರಜ್ಞ ಎಸ್ ಮುಲ್ಕ ಹೆಬ್ಬಾಳ್ ಬೆಂಗಳೂರು. ಕಾರ್ಯಕ್ರಮದ ವಂದನಾರ್ಪಣೆಯನ್ನು ದೇವಸ್ಥಾನದ ಕಾರ್ಯದರ್ಶಿಯಾದ ಎಂ ಪಿ ವೆಂಕಟೇಶ್ ನೆರವೇರಿಸುವರು.

ಅಧ್ಯಕ್ಷರು ಹಾಗೂ ದೇವಸ್ಥಾನದ ಪದಾಧಿಕಾರಿಗಳು ದೇವಸ್ಥಾನಕ್ಕೆ ಸ್ವಾಗತವನ್ನು ಬಯಸುವರು ಬಂದಿರುವ ಎಲ್ಲಾ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುವುದು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಇರುಮುಡಿ ಜೊತೆಗೆ 18 ಮೆಟ್ಟಿಲು ಹತ್ತಿ ದೇವರ ದರ್ಶನ ಮಾಡುವ ಒಂದು ಸುವರ್ಣ ಅವಕಾಶವನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ 9342310469 ಸಂಪರ್ಕಿಸಬಹುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...