ಬಿಜೆಪಿ – ಜೆಡಿಎಸ್ ಪಕ್ಷದಿಂದ 25 ರಿಂದ 30 ಜನ  ನಮ್ಮ ಪಕ್ಷಕ್ಕೆ ಬರುತ್ತಾರೆ : ಚಿತ್ರದುರ್ಗದಲ್ಲಿ ಸಚಿವ ಸುಧಾಕರ್ ಹೇಳಿಕೆ

2 Min Read

ವರದಿ ಮತ್ತು ಫೋಟೋ ಕೃಪೆ,  ಸುರೇಶ್ ಪಟ್ಟಣ್,                         ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮೇ. 17 :  ಕೇಂದ್ರ ಸರ್ಕಾರ ಪೆನ್ ಡ್ರೈವ್ ಪ್ರಕರಣದಲ್ಲಿ ನಮಗೆ ಸಹಕಾರ ಕೊಡುತ್ತಿಲ್ಲ. ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಕೊಟ್ಟು ದೇಶ ಬಿಟ್ಟು ಕಳಿಸಿದೆ. ಈ ದೇಶದಲ್ಲಿ ಎಲ್ಲೇ ಇದ್ರೂ ಹತ್ತು ನಿಮಿಷಕ್ಕೆ ಕರೆತರಬಹುದು. ಆದರೆ ಕೇಂದ್ರ ಸರ್ಕಾರ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸುಮ್ನೆ ಆಗಿದೆ. ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಕೇಂದ್ರ ಸರ್ಕಾರದ ಮೇಲೆ ಆರೋಪಿಸಿದ್ದಾರೆ.

ನಗರದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೆನ್‌ಡ್ರೈವ್ ಪ್ರಕರಣದಲ್ಲಿ ಎಸ್.ಐ.ಟಿ ಸರಿಯಾದ ತನಿಖೆ ಮಾಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ  ಪರಮೇಶ್ವರ್ ಗೃಹ ಸಚಿವರು ದಕ್ಷವಾಗಿ ನಿಭಾಯಿಸುತ್ತಿದ್ದಾರೆ. ಎಸ್.ಐ.ಟಿ  ಸ್ವತಂತ್ರ ತನಿಖಾ ತಂಡ ಆಗಿದ್ದು. ತನಿಖೆ ನಡೆಸುತ್ತಿದೆ. ಸಾವಿರಾರು ಜನ ಮಹಿಳೆಯರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಸಿಬಿಐ ಹಾಗೂ ಇತರೆ ಸಂಸ್ಥೆಗಳ ಮೂಲಕ ಹುಡುಕಲಿ. ಕೂಡಲೇ ಪ್ರಜ್ವಲ್ ಪಾಸ್ ಪೋರ್ಟ್ ಕ್ಯಾನ್ಸಲ್ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ಚುನಾವಣೆ ಬಳಿಕ ಸರ್ಕಾರ ಪತನ ಆದರೆ ನಾವು ಜವಾಬ್ದಾರರಲ್ಲ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ ಚುನಾವಣೆ ಬಳಿಕ ಕಾಂಗ್ರೆಸ್ ಗೆ ಜೆಡಿಎಸ್ ಬಿಜೆಪಿ ನಾಯಕರೇ ಬರುತ್ತಾರೆ. ಎರಡು ಪಕ್ಷದಿಂದ 25 ರಿಂದ 30 ಜನ  ನಮ್ಮ ಪಕ್ಷಕ್ಕೆ ಬರುತ್ತಾರೆ. ಕಾಂಗ್ರೆಸ್ ರಾಜ್ಯದಲ್ಲಿ ಮತ್ತಷ್ಟು ಬಲಿಷ್ಠ ಆಗುತ್ತೆ ಎಂದ ಸಚಿವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿ ಇಂದು ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ದಕ್ಷವಾಗಿದೆ. ಗೃಹ ಸಚಿವರಾಗಿ ಪರಮೇಶ್ವರ್ ರವರು ದಕ್ಷವಾಗಿ ನಿಭಾಯಿಸುತ್ತಿದ್ದಾರೆ.ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಸಹ ಎಲ್ಲ ಗಮನಹರಿಸಿದ್ದಾರೆ..ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಹದಗೆಡುವುದಿಲ್ಲ ಎಂದರು.

ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಈಗಾಗಲೇ ಸಿಎಂ, ಡಿಸಿಎಂ ಸಹ  ಪ್ರತಿಕ್ರಿಯೆ ನೀಡಿದ್ದಾರೆ… ನಾನು ಈಗ ಮತ್ತೆ ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನು ಸಹ ಮಾಧ್ಯಮಗಳಲ್ಲಿ ನೋಡಿದ್ದೇನೆ.. ಡಿಹೆಚ್ ಓ ರವರ ಜೊತೆ ಫೋನ್ ಮೂಲಕ ಮಾತಾಡಿ ಸಮಸ್ಯೆಗೆ ಬಗ್ಗೆ ಕೇಳಿದ್ದೇನೆ. ಒಂದು ವಾರದಲ್ಲಿ ಎಲ್ಲಾ ಸರಿ ಮಾಡುವುದಾಗಿ ಹೇಳಿದ್ದಾರೆ. ನೀತಿ ಸಂಹಿತೆ ಇರುವುದರಿಂದ ನಾವು ಅತ್ತ ಗಮನ ಹರಿಸಿಲ್ಲ..ಚುನಾವಣೆ ಮುಗಿದ ತಕ್ಷಣ ಎಲ್ಲ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುತ್ತೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *