ಗುಜರಾತ್ ಮಾಜಿ ಸಿಎಂ ಸೇರಿ 242 ಮಂದಿ ಪ್ರಯಾಣ : ಸಾವಿನ ಸಂಖ್ಯೆ 133ಕ್ಕೆ ಏರಿಕೆ..!

ಗುಜರಾತ್ ಅಹ್ಮದಾಬಾದ್ ಏರ್ಪೋರ್ಟ್ ನಲ್ಲಿ ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿದ್ದು, ಸಾವಿನ ಸಂಖ್ಯೆ ಏರುತ್ತಲೆ ಇದೆ. ಸದ್ಯಕ್ಕೆ 133 ಜನ ಸಾವಿನ ಬಗ್ಗೆ ಅಧಿಕೃತ ಮಾಹಿತಿ ಲಭಿಸಿದೆ. ಅಹ್ಮದಾಬಾದ್ ನಿಂದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಐದೇ ನಿಮಿಷದಲ್ಲಿ ಮೇಘನಿ ನಗರ್ ನಲ್ಲಿ ಪತನಗೊಂಡಿದೆ. ಇದರಿಂದ ಸಾವು ನೋವುಗಳೇ ಹೆಚ್ಚಾಗಿವೆ.

ಪತನಗೊಂಡ ವಿಮಾನದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ 242 ಜನ ಪ್ರಯಾಣ ಮಾಡ್ತಾ ಇದ್ದರು‌. ಅದರಲ್ಲಿ 230 ಪ್ರಯಾಣಿಕರಾಗಿದ್ರೆ, 12 ಜನ ಸಿಬ್ಬಂದಿಗಳಾಗಿದ್ರು. ಸದ್ಯದ ಸ್ಥಿತಿಯಲ್ಲಿ 133 ಜನ ಸಾವನ್ನಪ್ಪಿದ್ದಾರೆ ಎಂಬ ವರದಿ ಬಂದಿದೆ. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಯಿ ಬಗ್ಗೆ ಇನ್ನು ಸರಿಯಾದ ಮಾಹಿತಿ ಸಿಕ್ಕಿಲ್ಲ. ಆದರೆ ಕಾರ್ಯಾಚರಣೆ ನಡೆಯುತ್ತಿದೆ.

ಪತನಗೊಂಡ ವಿಮಾನವು ಅಹ್ಮದಾಬಾದ್ ನಿಂದ ಲಂಡನ್ ಗೆ ಪ್ರಯಾಣ ನಡೆಸಿತ್ತು. ಏರ್ ಇಂಡಿಯಾದ ‘ಏರ್ ಇಂದಿಯಾ -171’ ಹೆಸರಿನ ವಿಮಾನ ಇದಾಗಿತ್ತು. ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.10ಕ್ಕೆ ಟೇಕ್ ಆಫ್ ಆಗಿತ್ತು. ಇಲ್ಲಿಂದ ಹೊರಟ ವಿಮಾನವೂ ಲಂಡನ್ ನ ಗೆಟ್ಟಿಕ್ ವಿಮಾನ ನಿಲ್ದಾಣವನ್ನು ತಲುಪಬೇಕಿತ್ತು. ಆದರೆ ಅಷ್ಟರಲ್ಲಿ ಈ ಅವಗಢ ಸಂಭವಿಸಿದೆ. ಟೇಕ್ ಆಫ್ ಆದ ಐದೇ ನಿಮಿಷಕ್ಕೆ ದುರಂತ ನಡೆದು, ಹಲವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಪತನಗೊಂಡ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಸಾಧ್ಯವಾದಷ್ಟು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹಲವರ ಮಾಹಿತಿ ಇನ್ನು ಸಿಗಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks