ಬೆಂಗಳೂರು: ಸದನದಲ್ಲಿ ಚರ್ಚೆಗಿಂತ ಆರೋಪ – ಪ್ರತ್ಯಾರೋಪಗಳೇ ಜೋರಾಗಿ ನಡೆಯುತ್ತವೆ. ಇಂದು ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜೋರು ಮಾತಿನ ಗುದ್ದಾಟ ನಡೆದಿದೆ. ಇಂದು ಸದನದಲ್ಲಿ ಸಿಎಂ ಹುದ್ದೆಗಾಗಿ ಕೋಟಿ ಹಣದ ಚರ್ಚೆ ನಡೆದಿದೆ.
ಸದನದಲ್ಲಿ ಸಚಿವ ಎಂಬಿ ಪಾಟೀಲ್ ಹಾಗೂ ಜಾರ್ಜ್ ಹಾಗೂ ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಮಧ್ಯೆ ಮಾತಿನ ಯುದ್ಧ ನಡೆದಿದೆ. ಯತ್ನಾಳ್ ಮತ್ತು ಎಂಬಿ ಪಾಟೀಲ್ ನಡುವೆ 2,400 ಕೋಟಿ ವಿಚಾರ ಭಾರೀ ಸದ್ದು ಮಾಡಿದೆ. ಸಿಎಂ ಸ್ಥಾನಕ್ಕೆ 2,400 ಕೋಟಿ ಕೊಡಬೇಕು ಎಂಬ ಹೇಳಿಕೆ ವಿಚಾರ ಇಂದು ಪ್ರಸ್ತಾಪವಾಗಿದೆ.
ಸದನದಲ್ಲಿ ಯತ್ನಾಳ್ ಹೇಳಿಕೆಯನ್ನು ಎಂಬಿ ಪಾಟೀಲ್ ಪ್ರಸ್ತಾಪ ಮಾಡಿದ್ದಾರೆ. ನೀವೂ ಹೇಳಿದ ವಿಡಿಯೋ ದಾಖಲೆಯನ್ನು ಕೊಡುತ್ತೇನೆ. 2,400 ಕೋಟಿ ಸಿಎಂ ಹುದ್ದೆಗೆ ಅಂತ ನೀವೇ ಹೇಳಿದ್ರಿ ಎಂದು ಎಂಬಿ ಪಾಟೀಲ್ ಹೇಳಿದರು..
ಈ ವಿಚಾರಕ್ಕೆ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ಮೇಲೆ ಸಿಬಿಐ ತನಿಖೆ ನಡೆಯಲಿ. ನಾನು ತಯಾರಿದ್ದೇನೆ. ನೀವೂ ಡೀಲಿಂಗ್ ಮಾಸ್ಟರ್. ನನಗೆ ಹೇಳಬೇಕಿಲ್ಲ ಎಂದಿದ್ದಾರೆ.