ಮಗು ಬೇಕು ಅಂದ್ರೆ ಮೈದುನನ ಜೊತೆ …. : ಗಂಡ, ಅತ್ತೆ ಕಾಟಕ್ಕೆ 23 ವರ್ಷದ ಶಿಕ್ಷಕಿ ಆತ್ಮಹತ್ಯೆ..!

1 Min Read

ವಿದ್ಯಾವಂತರಾದ್ರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ. ಒಮ್ಮೊಮ್ಮೆ ಈ ಅವಿದ್ಯಾವಂತರು ಪದ್ಧತಿಯಂತೆ ಪಾಲಿಸಿಕೊಂಡು ಬಂದಿರುವ ವರದಕ್ಚಿಣೆಯ ಭೂತವೂ ಎಲ್ಲರನ್ನು ಬಿಟ್ಟು ಹೋಗುತ್ತೆ ಅಂತಾನೇ ಸಾಕಷ್ಟು ಮಂದಿ ಭಾವಿಸಿದ್ದರು. ಆದರೆ ಇತ್ತೀಚೆಗೆ ಹೆಚ್ಚು ಸುದ್ದಿ ಕೇಳಿದ್ದೆ ವರದಕ್ಷಿಣೆ ವಿಚಾರದಲ್ಲಿ ಕೊಟ್ಟ ಟಾರ್ಚರ್ ಗೆ ಅದೆಷ್ಟೋ ಹೆಣ್ಣು ಮಕ್ಕಳು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದೀಗ ದೊಡ್ಡಬಳ್ಳಾಪುರದಲ್ಲೂ ಅಂಥದ್ದೇ ಘಟನೆ ನಡೆದಿದೆ.

ದೊಡ್ಡಬಳ್ಳಾಪುರದ ಸೋತೇನಹಳ್ಳಿ ನಿವಾಸಿಯಾದ ಪುಷ್ಪವತಿಗೂ ತಪಸೀಹಳ್ಳಿ ಗ್ರಾಮದ ವೇಣು ಎಂಬುವವರಿಗೂ ಕಳೆದ ವರ್ಷ ಅಂದ್ರೆ 2024ರ ನವೆಂಬರ್ ನಲ್ಲಿ ಮದುವೆಯಾಗಿತ್ತು. ಮದುವೆಯಾಗಿ ವರ್ಷವಾಗುತ್ತಾ ಬಂದರು ವೇಣು ಮಾತ್ರ ತನ್ನ ಹೆಂಡತಿಯ ಜೊತೆಗೆ ಸಂಸಾರ ಮಾಡುತ್ತಿರಲಿಲ್ಲವಂತೆ. ಅದಕ್ಕೆ ಪುಷ್ಪವತಿ, ಏನೋ ಸಮಸ್ಯೆ ಇರಬೇಕು, ವೈದ್ಯರಿಗೆ ತೋರಿಸೋಣಾ ಎಂದರು ಮಾತು ಕೇಳಲಿಲ್ಲವಂತೆ. ಅದನ್ನ ತನ್ನ ಅತ್ತೆ ಭಾರತಿ, ಮಾವ ಗೋವಿಂದಪ್ಪನ ಬಳಿ ಸಮಸ್ಯೆ ಹೇಳಿಕೊಂಡರು ಬೆಂಬಲ ನೀಡದೆ, ಸೊಸೆಯನ್ನೇ ದಬಾಯಿಸಿದರಂತೆ.

ನಿನಗೆ ಅರ್ಜೆಂಟಾಗಿ ಮಗು ಬೇಕು ಅಂದ್ರೆ ಮೈದುನನ ಬಳಿ ಬೇಕಾದ್ರೆ ಮಲಗು ಎಂದಿದ್ದರಂತೆ. ಆಕೆಯ ಗಂಡನೇ ಸಂಸಾರ ಶುರು ಮಾಡಬೇಕು ಅಂದ್ರೆ ದೊಡ್ಡಬಳ್ಳಾಪುರದ ಬಳಿ ಒಂದು ಸೈಟು ಕೊಡುವಂತೆ ಡಿಮ್ಯಾಂಡ್ ಇಟ್ಟಿದ್ದರಂತೆ. ಈ ಹಿಂಸೆ ತಾಳದೆ ತವರು ಮನೆಗೆ ಬಂದಿದ್ದ ಪುಷ್ಪವತಿ, ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರಂತೆ‌ ಮನೆಯಲ್ಲಿ ಕೂತರೆ ಅದೇ ಚಿಂತೆ ಕಾಡುತ್ತೆ ಅಂತ ಕಾಲೇಜಿಗೆ ಮತ್ತೆ ಉಪನ್ಯಾಸಕಿಯಾಗಿ ಹೋಗುತ್ತಿದ್ದರಂತೆ. ಆದರೆ ಕಾಲೇಜಿಗೆ ಹೋಗಿ ಬರ್ತಿದ್ದ ಪುಷ್ಪವತಿಯನ್ನ ದೊಡ್ಡಬಳ್ಳಾಪುರದ ಬಸ್ ಸ್ಟಾಪ್ ನಲ್ಲಿ ಅಡ್ಡ ಹಾಕಿದ ಗಂಡ, ಆಕೆಯ ಮುಖಕ್ಕೆ‌ ಉಗಿದು, ನಿಂಗೆ ಒಂದು ಗತಿ ಕಾಣಿಸ್ತೀನಿ. ಮತ್ತೊಂದು ಮದುವೆ ಆಗ್ತೀನಿ ಅಂತೆಲ್ಲ ಬೆದರಿಸಿ ಹೋಗಿದ್ದನಂತೆ. ಅದನ್ನೆಲ್ಲಾ ಮನೆಯವರಿಗೆ ಹೇಳಿದ ಪುಷ್ಪವತಿ, ಮರುದಿನ ಎಂದಿನಂತೆ ಕಾಲೇಜಿಗೆ ಹೋದಳಂತೆ. ಆದರೆ ಮತ್ತೆ ಬರಲೇ ಇಲ್ಲ. ಎರಡು ದಿನದ ಬಳಿಕ ಘಾಟಿ ಬಳಿಯ ವಿಶ್ವೇಶ್ಚರಯ್ಯ ಪಿಕಪ್ ಡ್ಯಾಂನಲ್ಲಿ ಶವ ಪತ್ತೆಯಾಗಿದೆ.

Share This Article