ಮಂಗಳವಾರವಷ್ಟೇ ಕೇಂದ್ರ ಸರ್ಕಾರ ಅಗ್ನಿಪಥ್ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿತ್ತು. ಇದನ್ನು ವಿರೋಧಿಸಿ ಇಂದು ಬಿಹಾರದಲ್ಲಿ ರೈಲು ತಡೆದು, ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ. ಈ ಹಿನ್ನೆಲೆ 22 ಮಧ್ಯೆ ರೈಲ್ವೇ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸೇನೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಯುವಕರಿಗೆ ಅವಕಾಶ ಸಿಗಲೆಂದು ಕೇಂದ್ರ ಸರ್ಕಾರ ಅಗ್ನಿಪತ್ ಯೋಜನೆ ಜಾರಿಗೆ ತಂದಿತ್ತು. ಅಗ್ನಿಪಥ್ ಯೋಜನೆ ಮುಖಾಂತರ ಅಲ್ಪಾವಧಿಗೆ ಸೇನೆಗೆ ಸೇರಿಸಿಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ಈ ನಡೆ ವಿರೋಧಿಸಿ ಎರಡು ದಿನದಿಂದ ಪ್ರತಿಭಟನೆ ನಡೆಯುತ್ತಿದೆ. ಆದರೆ ಇಂದು ಅತಿರೇಕ ತಲುಪಿದ್ದು, ಬಿಹಾರದಲ್ಲಿ ಕೆಲ ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ರೈಲಿನ ಕಿಟಕಿಗಳನ್ನು ಹೊಡೆದು ಹಾಕಲಾಗಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಜೊತೆಗೆ ಐದು ರೈಲುಗಳ ಸಂಚಾರದ ಪಟ್ಟಿಯೂ ವ್ಯತ್ಯಯವಾಗಿದೆ. ಇದರಿಂದ ಒಟ್ಟು 29 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಈ ಘಟನೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸರ್ಕಾರ ಯುವಕರ ತಾಳ್ಮೆ ಪರೀಕ್ಷಿಸುವುದು ಬೇಡ ಎಂದು ಎಚ್ಚರಿಸಿದ್ದಾರೆ.