ಚಳ್ಳಕೆರೆ | ಕೋಡಿಹಳ್ಳಿ ಗ್ರಾಮದಲ್ಲಿ 20 ನೇ ವರ್ಷದ ಅದ್ದೂರಿ ಗಣೇಶೋತ್ಸವ ಆಚರಣೆ

2 Min Read

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 12 :  ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಜೈ ಭೀಮ್ ಶ್ರೀ ಯುವ ವಿನಾಯಕ ಸಂಘ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘ ಇವರ ಸಹಯೋಗದೊಂದಿಗೆ ಈ ಬಾರಿ ದಲಿತ ಸಮುದಾಯದ ಶಕ್ತಿ ದೇವತೆಯಾದ ಶ್ರೀ ಶ್ರೀ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಶ್ರೀ ಗೌರಿ ಗಣೇಶನನ್ನು ಪ್ರತಿಷ್ಟಾಪಿಸಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಪ್ರತಿ ದಿನ ಸಂಜೆ ಯುವಕ ಯುವತಿಯರು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡ್ಯಾನ್ಸರ್ ಮೈಕಲ್ ವೆಂಕಿ ನಡೆಸಿಕೊಡುತ್ತಿದ್ದರು, ಅಲ್ಲದೆ ಪ್ರತಿ ದಿನವೂ ವಿವಿಧ ಕುಟುಂಬಗಳಿಂದ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಇರುತಿತ್ತು. ಕೊನೆಯ ದಿನ ಇಡೀ ಸಮುದಾಯದ ಎಲ್ಲ ಜನತೆಗೆ ಅನ್ನ ಸಂತರ್ಪಣೆ ನಡೆಯಿತು, ಸುಮಾರು 12 ಅಡಿ ಶ್ರೀರಾಮ ಸೀತೆ ಹಾಗೂ ಆಂಜನೇಯ ಇರುವ ಶ್ರೀ ಗಣೇಶನನ್ನು ಡಾ.ಮುನಿಸ್ವಾಮಿ ರೆಡ್ಡಿರವರು ಇದರ ದಾನಿಗಳಾಗಿದ್ದರೆ, ಈ ಗಣೇಶ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಹೂವಿನ ಮಾಲೆ ಹರಾಜು ಪ್ರಕ್ರಿಯೆ ಮುಗಿಸಿ, ವಿಸರ್ಜನೆಗೆ ಚಾಲನೆ ನೀಡಲಾಯಿತು.

ಗ್ರಾಮದ ಎಲ್ಲ ರಾಜ ಬೀದಿಗಳಲ್ಲಿ ಪಟಾಕಿ ಸಿಡಿಸುತ್ತಾ ಡಿ.ಜೆ ಸೌಂಡ್ ನೊಂದಿಗೆ ಸಾವಿರಾರು ಯುವಕ ಯುವತಿಯರು ಹಿರಿಯರು ಕುಣಿದು ಕುಪ್ಪಳಿಸಿದರು ಮೆರವಣಿಗೆಯು ಅತ್ಯಂತ ವಿಜೃಂಭಣೆಯಿಂದ ಕೂಡಿತ್ತು,ಗ್ರಾಮದ ಜನರು ಗಣಪನಿಗೆ ವಿಶೇಷ ಪೂಜೆಯನ್ನು ಮಾಡಿಸಿದರೆ,ಶ್ರೀಯುತ ನಾಗರಾಜು ರವರು ಬಂದ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು, ಸಾವಿರಾರು ಭಕ್ತರು ಗಣೇಶನ ಕೃಪೆಗೆ ಪಾತ್ರರಾದರು.
ಯಾವುದೇ ಅಹಿತಕರ ಘಟನೆಗಳು ನಡೆಯದೆ ಸುರಕ್ಷಿತವಾಗಿ ಗಣಪತಿಯನ್ನು ಪೂಜಿಸಿ ನಮ್ಮ ಗ್ರಾಮದ ಕೆರೆಯಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ವಿಸರ್ಜನೆ ಮಾಡಲಾಯಿತು.

ಈ ಗೌರಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಸಣ್ಣ ನಾಗಯ್ಯ, ಎಂ.ಏಚ್ ತಿಪ್ಪೇಸ್ವಾಮಿ, ಮಲ್ಲಯ್ಯ, ಗಂಗಣ್ಣ,ಹನುಮಂತಪ್ಪ, ಪುಟ್ಟಣ್ಣ, ತಿಪ್ಪೇಸ್ವಾಮಿ, ಓಬಣ್ಣ, ದುರುಗಣ್ಣ, ನಿಂಗಣ್ಣ, ಕೊಲ್ಲಾರಪ್ಪ , ಲಿಂಗರಾಜು.ಡಿ, ಮಲ್ಲಿಕಾರ್ಜುನಯ್ಯ.ಟಿ, ವಿನಯ್ ಕುಮಾರ್.ಬಿ.ಎಂ, ಮಂಜುನಾಥ್, ರುದ್ರಮುನಿ.ಏಚ್, ಮೋಹನ್ .ಡಿ ನಂದೀಶ್. ಓ ಶ್ರೀಧರ್.ಏಚ್ , ರಾಜು.ಡಿ , ವಿಜಯ್ ಕುಮಾರ್.ಡಿ, ತಿಪ್ಪೇಸ್ವಾಮಿ.ಯು, ರಮೇಶ್.ಎಂ, ಶಿವಮೂರ್ತಿ.ಟಿ , ಗುರುಮೂರ್ತಿ, ಚಿದಾನಂದ್, ಉಪೇಂದ್ರ, ರವೀಶ್, ಮಲ್ಲಿಕಾರ್ಜುನ್.ಜಿ, ಅರುಣ್ ಕುಮಾರ್.ಟಿ, ದಯಾನಂದ.ಟಿ, ಶಿವಪುತ್ರ, ಡ್ಯಾನ್ಸ್ ಮಾಸ್ಟರ್ ವೆಂಕಟೇಶ್, ತಿಪ್ಪೇಶ್ , ಮನೋಜ್ ಕುಮಾರ್.ಟಿ, ಜಯಂತ್, ನಾಗೇಶ್, ಮಂಜು, ಕಿರಣ್, ಸ್ವಾಮಿ.ಆರ್, ಕೋಟೆಶ್, ಗೋಪಿನಾಥ್, ಮೈಲಾರಿ, ದುರುಗೇಶ್, ಅಭಿಷೇಕ್, ವಿಜಯ್.ಎಸ್, ಮಾರಣ್ಣ, ಶಿವಪ್ಪ, ಪರಶುರಾಮ್, ಕಣುಮೇಶ್ , ಮಹೇಶ್, ಕೊಲ್ಲಾರಿ ಭಾಗವಹಿಸಿದ್ದರು. ಹಾಗೂ ಸಮುದಾಯದ ಮುಖಂಡರು, ಯಜಮಾನರು ಸಮಸ್ತ ಯುವಕ ಯುವತಿಯರು, ಸರ್ವ ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *