ಆರೋಗ್ಯವನ್ನು ತುಂಬಾ ಕಾಳಜಿಯಿಂದ ಕಾಪಾಡಿಕೊಳ್ಳಬೇಕು. ನೀರು ಕುಡಿಯದೆ ನೆಗ್ಲೆಕ್ಟ್ ಮಾಡುತ್ತಾ ಹೋದರೆ ಆರೋಗ್ಯ ಹದಗೆಡುತ್ತಾ ಹೋಗುತ್ತದೆ. ಇತ್ತಿಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಸಾಕಷ್ಟು ಜನರಿಗೆ ಸಾಮಾನ್ಯ ಕಾಯಿಲೆಯಾಗಿ ಬಿಟ್ಟಿದೆ. ಅದಕ್ಕೆ ಕಾರಣ ಸರಿಯಾದ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳದೆ ಇರುವುದು. ಮೂತ್ರ ಕಂಟ್ರೋಲ್ ಮಾಡುವುದು ಹೀಗೆ ಹಲವು ಕಾರಣಗಳಿರುತ್ತವೆ.
ಇದೀಗ ಹೈದ್ರಾಬಾದ್ ನಲ್ಲಿ ಘಟನೆಯೊಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬನ ಕಿಡ್ನಿಯಲ್ಲಿ 206 ಕಲ್ಲುಗಳು ಪತ್ತೆಯಾಗಿದೆ. ಹೈದ್ರಾಬಾದ್ ನಲ್ಲಿರುವ ಅವೆರ್ ಗ್ಲೆನೆಗಲ್ಸ್ ಗ್ಲೋಬಲ್ ಹಾಸ್ಪಿಟಲ್ ನಲ್ಲಿ ಆ ವ್ಯಕ್ತಿಗೆ ಸರ್ಜರಿ ಮಾಡಿದ್ದಾರೆ. ಕಳೆದ ಆರು ತಿಂಗಳಿನಿಂದ ವೀರಮಳ್ಳ ರಾಮಲಕ್ಷಮಯ್ಯ ಕಿಡ್ನಿ ಸ್ಟೋನ್ ನಿಂದಾಗಿ ನರಳಾಡುತ್ತಿದ್ದ. ಸ್ಥಳೀಯರಿಂದ ಔಷಧ ತೆಗೆದುಕೊಳ್ಳುತ್ತಿದ್ದ, ಆದರೆ ತೆಗೆದುಕೊಂಡಾಗ ಮಾತ್ರ ಗುಣಮುಖನಾಗುತ್ತಿದ್ದ, ನೋವು ಕಡಿಮೆಯಾಗುತ್ತಿತ್ತು. ಆದರೆ ಬಳಿಕ ಮತ್ತದೆ ನೋವು.
ಇದೀಗ ಆಸ್ಪತ್ರೆಗೆ ದಾಖಲಾಗಿ ಸರ್ಜರಿ ಮಾಡಿಸಿಕೊಂಡ ಬಳಿಕ ನೋವಿನಿಂದ ಮುಕ್ತಿಪಡೆದಿದ್ದಾನೆ. ಈ ಶಾಕಿಂಗ್ ಸರ್ಜರಿ ಬಗ್ಗೆ ಮಾತನಾಡಿದ ವೈದ್ಯ ನವೀನ್ ಕುಮಾರ್, ಆತ ಆಸ್ಪತ್ರೆಗೆ ಬಂದ ಕೂಡಲೇ ನಾವೂ ಆತನನ್ನು ತಪಾಸಣೆ ಮಾಡಿದೆವು. ನಂತರ ಸಿಟಿ ಕ್ಯೂಬ್ ಟೆಸ್ಟ್ ಮಾಡಿಸಿದ್ದೆವು. ಈ ವೇಳೆ ಅವರ ಎಡ ಕಿಡ್ನಿಯಲ್ಲಿ ಕಲ್ಲು ಬೆಳೆದಿರುವುದು ಗೊತ್ತಾಯಿತು. ಕೀಹೋಲ್ ಸರ್ಜರಿ ಬಗ್ಗೆ ಆ ವ್ಯಕ್ತಿಗೆ ತಿಳಿಸಿ, ಸರ್ಜರಿ ಮಾಡಿ ತೆಗೆದವು ಎಂದು ಮಾಹಿತಿ ನೀಡಿದ್ದಾರೆ.