ಉಕ್ರೇನ್ : ರಷ್ಯಾ ಸಾರಿದ ಯುದ್ಧಕ್ಕೆ ಹೆದರದೆ ಪುಟ್ಟ ದೇಶವಾದರು ಧೈರ್ಯವಾಗಿ ನಿಂತಿದೆ ಉಕ್ರೇನ್. ಈ ಯುದ್ಧ 100 ದಿನ ಸಮೀಪಿಸುತ್ತಿದ್ದು, ರಷ್ಯಾದ ಮೇಲೆ ಉಕ್ರೇನ್ ಅಧ್ಯಕ್ಷ ಗಂಭೀರ ಆರೋಪ ಮಾಡಿದ್ದಾರೆ. ರಷ್ಯಾ ಸುಮಾರು 2 ಮಕ್ಕಳನ್ನು ಕರೆದೊಯ್ದಿದೆ ಎಂದು ಆರೋಪಿಸಿದ್ದಾರೆ.
ಅಂತರಾಷ್ಟ್ರೀಯ ಮಕ್ಕಳ ದಿನದಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ, ರಷ್ಯಾ ಮಕ್ಕಳನ್ನು ಕದ್ದೊಯ್ದಿರುವುದಲ್ಲದೆ, ವಲಸೆ ಹೋದ ಕೋಟ್ಯಾಂತರ ಜನರನ್ನು ಮರಳಿ ಬಾರದಂತೆ ತಡೆದಿದೆ. ಆದರೂ ಉಕ್ರೇನ್ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಜನ ಎಂದಿಗೂ ಶರಣಾಗುವುದಿಲ್ಲ ಎಂದು ಆತ್ಮ ಸ್ಥೈರ್ಯದಿಂದ ಹೇಳಿದ್ದಾರೆ.
ರಷ್ಯಾದ ಆಕ್ರಮಣ ಇನ್ನು ಕೂಡ ನಿಂತಿಲ್ಲ. ಕಳೆದ ಮೂರು ತಿಂಗಳಿನಿಂದ 1.25 ಲಕ್ಷ ಚದುರ ಕಿಲೋ ಮೀಟರ್ ವರೆಗೆ ಹೆಚ್ಚಾಗಿದೆ. 3 ಲಕ್ಷ ಚದುರ ಕಿಲೋ ಮೀಟರ್ ತನಕ ಸ್ಪೋಟಗೊಂಡ ಹೊಗೆಯಿಂದ ಕಲುಷಿತಗೊಂಡಿದೆ. ಈಗ ಯುದ್ಧ ನಿಂತರು ಯುದ್ಧಭೂಮಿ ಚೇತರಿಸಿಕೊಳ್ಳಲು ಸಾಕಷ್ಟು ವರ್ಷಗಳು ಬೇಕಾಗುತ್ತದೆ.