ಬೆಂಗಳೂರು: ಕಳೆದ ಕೆಲ ತಿಂಗಳಿನಿಂದಾನು ಈ ಎರಡು ಸಾವಿರ ರೂಪಾಯಿ ನೋಟುಗಳ ದರ್ಶನ ಭಾಗ್ಯವೇ ಇರಲಿಲ್ಲ. ಆದರೆ ಇದೀಗ ಆ ಎರಡು ಸಾವಿರ ನೋಟು ಇನ್ಮುಂದೆ ಚಲಾವಣೆಯಲ್ಲಿ ಇರಲ್ಲ ಎಂದು RBI ಸೂಚನೆ ನೀಡಿದೆ. 2 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಬ್ಯಾನ್ ಮಾಡಲಾಗಿದೆ. ಈಗಾಗಲೇ ಆ ನೋಟುಗಳನ್‌ನು ಸಂಗ್ರಹ ಮಾಡಿಟ್ಟಿದ್ದರೆ, ಅವುಗಳನ್ನು ಬದಲಾವಣೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.
2000 ಸಾವಿರ ರೂಪಾಯಿ ನೋಟಿ ಚಲಾವಣೆಯನ್ನು ಹಿಂಪಡೆಯಲಾಗಿದೆ ಎಂದು ಆರ್ಬಿಐ ಇಂದು ಆದೇಶ ಹೊರಡಿಸಿದೆ. ನೋಟು ಇರುವವರು ಬ್ಯಾಂಕ್ ಗಳಿಗೆ ತೆರಳಿ ಬದಲಾವಣೆ ಮಾಡಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ.
2016ರಲ್ಲಿ ನೋಟ್ ಬ್ಯಾನ್ ಆದಾಗ 2000 ರೂಪಾಯಿ ನೋಟನ್ನು ಪರಿಚಯಿಸಲಾಗಿತ್ತು. ಕಾಲ ಕ್ರಮೇಣ ಆ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು. ಅಂದ್ರೆ 2018-19ರಲ್ಲಿಯೇ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು. ಮುದ್ರಿಸಿದ್ದ ನೋಟಿಗಳೇ ಅಲ್ಲಲ್ಲಿ ಚಲಾವಣೆಯಾಗುತ್ತಿದ್ದವು. ಇದೀಗ ಆರ್ಬಿಐ ಆ ನೋಟುಗಳನ್ನು ಬ್ಯಾನ್ ಮಾಡಿದೆ. ಮೇ 23ರ ನಂತರ ಯಾವುದೇ ಬ್ಯಾಂಕ್ ಗಳಿವೆ ಹೋದರೂ ಅಲ್ಲಿ ವಿನಿಮಯ ಮಾಡಿಕೊಳ್ಳಬಹುದಾಗಿದೆ.