ನವದೆಹಲಿ: ಗ್ಯಾಸ್ ಬೆಲೆಯಲ್ಲಿ ಏರಿಕೆ ಕಂಡಿದ್ದೆ ಆಯ್ತು. ಅದೆಷ್ಟೋ ಹಳ್ಳಿಗಳಲ್ಲಿ ಈಗ ಗ್ಯಾಸ್ ಬಳಕೆದಾರರೇ ಇಲ್ಲದಂತೆ ಆಗಿದೆ. ಮತ್ತೆ ಸೌದೆ ಒಲೆಯ ಮೊರೆ ಹೋಗಿದ್ದಾರೆ. ಅದಕ್ಕೆಲ್ಲಾ ಕಾರಣ ಗ್ಯಾಸ್ ಬೆಲೆ ಗಗನಕ್ಕೇರಿದ್ದೆ ಆಗಿದೆ. ಇದೀಗ ಮಹಿಳೆಯರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಅದುವೆ ಗ್ಯಾಸ್ ಬೆಲೆಯಲ್ಲಿ ಬಾರೀ ಪ್ರಮಾಣದ ಇಳಿಕೆಯಾಗುತ್ತಿದೆ.
ಕೇಂದ್ರ ಸರ್ಕಾರ ಇಂದು ಗ್ಯಾಸ್ ಬೆಲೆಯಲ್ಲಿ ಇಳಿಕೆ ಮಾಡುವ ಸಾಧ್ಯತೆ ಇದೆ. ಸುಮಾರು 200 ರೂಪಾಯಿ ಇಳಿಕೆ ಮಾಡುವ ಸಾಧ್ಯತೆ ಇದೆ. ಮುಂಸಿನ 24 ಗಂಟೆಯಲ್ಲಿ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಈಗಾಗಲೇ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನಲ್ಲಿ ಇಳಿಕೆ ಮಾಡಿದ್ದಾರೆ ಎನ್ನಲಾಗಿದೆ.
ಹಲವು ವರ್ಷಗಳಿಂದ ವಾಣಿಜ್ಯ ಹಾಗೂ ಗೃಹಪಯೋಗಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಕಾಣುತ್ತಲೆ ಇದೆ. ಈಗ ಕೇಂದ್ರ ಸರ್ಕಾರ ಗ್ಯಾಸ್ ರೇಟ್ ಇಳಿಕೆ ಮಾಡುವ ಮನಸ್ಸು ಮಾಡಿದ್ದು, ಮಹಿಳೆಯರಲ್ಲಂತು ಸಂತಸ ತಂದಿದೆ. ಚುನಾವಣಾ ಹೊತ್ತಲ್ಲಿ ಈ ನಿರ್ಧಾರಕ್ಕೆ ಬಂದಿರುವುದು ಪೊಲಿಟಿಕಲ್ ಸ್ಟಾಟರ್ಜಿ ಎಂದೇ ಹೇಳಲಾಗುತ್ತಿದೆ. ಆದರೆ ಮಹಿಳೆಯ ಜೇಬಿಗೆ ಕಡಿಮೆ ಕತ್ತರಿ ಬೀಳುತ್ತಿರುವುದು ಕೊಂಚ ನೆಮ್ಮದಿ ತಂದಿದೆ.