ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಒತ್ತು ನೀಡಲಾಗಿದೆ. ಸುಮಾರು 2000 ಸರ್ವೇ ಸೆಟಲ್ಮೆಂಟ್ ಹಾಗೂ ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಫೆಬ್ರವರಿ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಡಿಪ್ಲೊಮಾ, ಎಂಜಿನಿಯರಿಂಗ್ ಮತ್ತು ಪಿಯುಸಿ ಪಾಸಾದವರು ಅರ್ಜಿ ಹಾಕಬಹುದು.
ಇನ್ನು ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಪೋಸ್ಟ್ ಗಳು ಖಾಲಿ ಇದೆ ಎಂಬುದನ್ನು ನೋಡುವುದಾದರೆ, ಕೋಲಾರ- 53, ಚಿಕ್ಕಬಳ್ಳಾಪುರ- 45, ಗದಗ- 54, ಚಿಕ್ಕಮಗಳೂರು- 83, ಉಡುಪಿ- 86, ಉತ್ತರ ಕನ್ನಡ- 75, ಕೊಡಗು- 25, ಚಿತ್ರದುರ್ಗ- 73, ಚಾಮರಾಜನಗರ- 35, ತುಮಕೂರು- 110, ಬಿಜಾಪುರ- 32, ಬೆಳಗಾವಿ – 85, ಬಳ್ಳಾರಿ- 55, ವಿಜಯನಗರ- 47, ದಕ್ಷಿಣ ಕನ್ನಡ- 36, ದಾವಣಗೆರೆ- 95, ಧಾರವಾಡ- 92, ಬೆಂಗಳೂರು ಗ್ರಾಮಾಂತರ- 66, ಬೆಂಗಳೂರು ಜಿಲ್ಲೆ- 125, ಯಾದಗಿರಿ- 20, ರಾಮನಗರ – 100, ರಾಯಚೂರು- 40, ಶಿವಮೊಗ್ಗ- 125, ಹಾವೇರಿ- 152, ಹಾಸನ- 60, ಬಾಗಲಕೋಟೆ- 47, ಬೀದರ್- 35, ಮಂಡ್ಯ- 71, ಮೈಸೂರು- 40, ಕೊಪ್ಪಳ- 28, ಕಲಬುರಗಿ- 10 ಹುದ್ದೆಗಳು ಖಾಲಿ ಇದೆ.
ಲೈಸೆನ್ಸ್ಡ್ ಲ್ಯಾಂಡ್ಲಾರ್ಡ್ಸ್ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪಿಯುಸಿ, ಡಿಪ್ಲೋಮಾ, ಬಿಇ/ಬಿ.ಟೆಕ್ ಇಲ್ಲವೇ, ಐಟಿಐ ಅನ್ನು ಕಡ್ಡಾಯವಾ ಉತ್ತೀರ್ಣರಾಗಿರಬೇಕು. ಕನಿಷ್ಠ 18 ವರ್ಷ ಹಾಗೂ ಗರಿಷ್ಠ 65 ವರ್ಷ ವಯಸ್ಸು ದಾಟಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ. ಎಲ್ಲ ವರ್ಗದ ಅಭ್ಯರ್ಥಿಗಳಿಗೆ 1000 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಟ್ರೈನಿಂಗ್ ಶುಲ್ಕ- 5000 ರೂ. ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಹಾಗೂ ಲೈಸೆನ್ಸ್ ಶುಲ್ಕ- 3000 ರೂಪಾಯಿ ಪಾವತಿಸಬೇಕು.