ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಇಂದು ನಿನ್ನೆಯದ್ದಲ್ಲ. ಜೊತೆಗೆ ಆಗಾಗ ಈ ಗಡಿ ವಿವಾದ ಕ್ಯಾತೆಯನ್ನು ತೆಗೆಯುತ್ತಲೆ ಇರುತ್ತಾರೆ. ಮೊನ್ನೆಯಷ್ಟೇ ಕರ್ನಾಟಕದ ಬಸ್ ಗಳ ಮೇಲೆ ಮಸಿಯಲ್ಲಿ ಬರೆದು ಕ್ಯಾತೆ ಸೃಷ್ಟಿ ಮಾಡಿದ್ದರು. ಬಳಿಕ ಒಂದು ದಿನದ ಮಟ್ಟಿಗೆ ಬಸ್ ಸಂಚಾರ ಕೂಡ ನಿಂತು ಹೋಗಿತ್ತು.
ಈ ಗಡಿ ವಿವಾದದ ತೀರ್ಪು ಇಂದು ಹೊರಬೀಳಲಿದೆ. ಈ ಗಡಿ ವಿವಾದ ಕೋರ್ಟ್ ವ್ಯಾಪ್ತಿಗೆ ಬರುತ್ತದೆಯೋ..? ಇಲ್ಲವೋ ಎಂಬ ತೀರ್ಪು ಇಂದು ಹೊರಬೀಳಲಿದೆ. 2004ರಲ್ಲಿ ಮಹಾರಾಷ್ಟ್ರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇಂದು ಆ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ಸಾಧ್ಯತೆ ಇದೆ.
ಸುಮಾರು 18 ವರ್ಷಗಳಿಂದಾನು ಈ ವಿಚಾರದಲ್ಲಿ ಕಾನೂನು ಸಮರ ನಡೆಯುತ್ತಲೆ ಇದೆ. ಹೀಗಾಗಿ ಇಂದು ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ನತ್ತ ನೆಟ್ಟಿದೆ. ಕೋರ್ಟ್ ನಿಂದ ಯಾವ ರೀತಿಯಾದ ತೀರ್ಪು ಬರುತ್ತೆ ಎಂಬುದು ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡು ಕಡೆ ಕಾಯುತ್ತಿದ್ದಾರೆ.