18 ಬಿಜೆಪಿ ನಾಯಕರ ಅಮಾನತು ; ಯಾವೆಲ್ಲಾ ಸೌಲಭ್ಯಗಳು ನಿಷಿದ್ಧ ಗೊತ್ತಾ..?

suddionenews
1 Min Read

ಬೆಂಗಳೂರು; ಸ್ಪೀಕರ್ ಎಂಬುದನ್ನು ಮರೆತ ಬಿಜೆಪಿ ನಾಯಕರು ಅವರ ಪೀಠದ ಮೇಲೆಯೇ ಹತ್ತಿ, ಬಜೆಟ್ ಪ್ರತಿಯನ್ನು ಹರಿದು ಹಾಕಿ, ಅಗೌರವ ತೋರಿಸಿದ ಹಿನ್ನೆಲೆ ಆರು ತಿಂಗಳುಗಳ ಕಾಲ 18 ಬಿಜೆಪಿ ನಾಯಕರನ್ನು ವಿಧಾನಸಭೆಯಿಂದ ಅಮಾನತು ಮಾಡಲಾಗಿದೆ. ಹೀಗಾಗಿ ಅವರಿಗೆ ಸಿಗುವ ಸೌಲಭ್ಯಗಳನ್ನು ಕಟ್ ಮಾಡಲಾಗಿದೆ. ಹಾಗಾದ್ರೆ ಯಾರಿಗೆ ಯಾವೆಲ್ಲಾ ಸೌಲಭ್ಯಗಳು ಸಿಗುತ್ತಾ ಇತ್ತು ಎಂಬ ಮಾಹಿತಿ ಇಲ್ಲಿದೆ.

ಅಮಾನತಾಗಿರುವ ನಾಯಕರಿಗೆ ಸಮಿತಿಗಳ ಚುನಾವಣೆಯಲ್ಲಿ ಶಾಸಕರು, ಮತದಾನ್ ಹಕ್ಕು ಇರುವುದಿಲ್ಲ. ಈ ಅವಧಿಯಲ್ಲಿ ಶಾಸಕರು ವಿಧಾನಸಭೆಯ ಸಭಾಂಗಣ, ಲಾಭಿ ಮತ್ತು ಗ್ಯಾಲರಿಗಳಿಗೂ ಪ್ರವೇಶ ಮಾಡುವಂತೆ ಇಲ್ಲ. ಅಮಾನತುಗೊಂಡ ಸದಸ್ಯರಾಗಿರುವ ವಿಧಾನಮಂಡಲದ ಸ್ಥಾಯಿ ಸಮಿತಿಗಳ ಸಭೆಯಲ್ಲೂ ಭಾಗವಹಿಸುವಂತಿಲ್ಲ. ವಿಧಾನ ಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರುಗಳ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡತಕ್ಕದಲ್ಲ. ಅಮಾನತಿನ ಅವಧಿಯಲ್ಲಿ ಶಾಸಕರು ನೀಡುವ ಯಾವುದೇ ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ. ಅಮಾನತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಶಾಸಕರು ಮತದಾನ ಮಾಡುವಂತಿಲ್ಲ. ಅಮಾನತ್ತಿನಲ್ಲಿರುವವರಿಗೆ ದಿನಭತ್ಯೆಯನ್ನು ನೀಡುವುದಿಲ್ಲ.

ಈ ಎಲ್ಲಾ ಸೌಲಭ್ಯಗಳಿಂದ ಆರು ತಿಂಗಳುಗಳ ಕಾಲ ವಂಚಿತರಾದವರ ಪಟ್ಟಿ ಇಲ್ಲಿದೆ, ದೊಡ್ಡಣ್ಣ ಗೌಡ ಪಾಟೀಲ್, ಸಿ.ಕೆ.ರಾಮಮೂರ್ತಿ, ಅಶ್ಚತ್ಥ ನಾರಾಯಣ, ಎಸ್.ಆರ್.ವಿಶ್ವನಾಥ್, ಭೈರತಿ ಬಸವರಾಜ್, ಎಂ.ಆರ್.ಪಾಟೀಲ್, ಬಿ.ಸುರೇಶ್ ಗೌಡ, ಉಮನಾಥ್ ಕೋಟ್ಯಾನ್, ಶರಣು ಸಲಗಾರ್, ಶೈಲೇಂದ್ರ ಬೆಲ್ದಾಲ್, ಯಶ್ ಪಾಲ್ ಸುವರ್ಣ, ಹರೀಶ್ ಬಿಪಿ, ಭರತ್ ಶೆಟ್ಟಿ, ಮುನಿರತ್ನ, ಬಸವರಾಜ್ ಮುತ್ತಿಮೋಡ್, ಧೀರಜ್ ಮುನಿರಾಜು, ಡಾ.ಚಂದ್ರು ಲಮಾಣಿ ವಿಧಾನಸಭೆಯಿಂದ ಅಮಾನತುಗೊಂಡವರಾಗಿದ್ದಾರೆ. ಅಮಾನತ್ತಾದ ಬಳಿಕವೂ ಸದನದಲ್ಲಿ ಧರಣಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *