ಭೂಕಂಪ ಇಂಡೋನೇಷಿಯಾ ಜನರ ನೆಮ್ಮದಿ ಕೆಡಿಸಿದೆ. ಜಾವಾ ದ್ವೀಪದಲ್ಲಿ 5.6 ತೀವ್ರತೆಯಲ್ಲಿ ಸಂಭವಿಸಿರುವ ಭೂಕಂಪದಿಂದ ಹಲವು ಕಟ್ಟಡಗಳು ಧರೆಗುರುಳಿವೆ. ಧರೆಗುರುಳಿದ ಕಟ್ಟಡದ ಅವಶೇಷಗಳಡಿ ಸಿಲುಕಿ ಸುಮಾರು 162 ಮಂದಿ ಸಾವನ್ನಪ್ಪಿದ್ದಾರೆ. 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಭೂಕಂಪನದಿಂದ ಕಟ್ಟಡಗಳು ಧರೆಗುರುಳಿವೆ. ಈ ವೇಳೆ ತಮ್ಮ ಪ್ರಾಣ ಉಳಿಸಿಕೊಳ್ಳಲು ಜನ ಹೊರಗೆ ಓಡಿ ಬಂದಿದ್ದಾರೆ. ಮನೆಯೊಳಗೆ ಸಿಲುಕಿದವರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಅಸುನೀಗಿದ್ದಾರೆ. ಕಟ್ಟಡದ ಕೆಳಗೆ ಸಿಲುಕಿರುವ ಜನರನ್ನು ರಕ್ಷಣೆ ಮಾಡಲು ಯತ್ನಿಸುತ್ತಿದ್ದಾರೆ.

ಇಂಡೋನೇಷ್ಯಾದಿಂದ ರಾಜಧಾನಿ ಜಕರ್ತಾದಿಂದ 75 ಕಿ.ಮೀ ಇರುವ ಜಾವಾ ಪ್ರಾಂತ್ಯದಲ್ಲಿ ಭೂಕಂಪಿಸಿದೆ. ಸುಮಾರು ಮೂರು ಬಾರಿ ಹತ್ತು ಸೆಕೆಂಡುಗಳ ಕಾಲ ಭೂಕಂಪಿಸಿದೆ. ಜಾವಾ ಪ್ರದೇಶದಿಂದ ಈಗಾಗಲೇ ಐದು ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

