ಬೆಳಗಾವಿ: ರೈಲ್ವೆ ಟ್ರ್ಯಾಕ್ ದಾಟುವಾಗ ಯಾವಾಗಲೂ ಹುಷರಾಗಿ ಇರಬೇಕಾಗುತ್ತದೆ. ಟ್ರೈನ್ ಬರುವುದನ್ನೇ ಗಮನಿಸದೆ ಮುಂದೇ ನಡೆದು ಅದೆಷ್ಟೋ ದುರ್ಘಟನೆಗಳು ನಡೆದಿವೆ. ಇದೀಗ ಟ್ರೈನ್ ಸಿಲುಕಿ ಹದಿನಾರು ಕುರಿಗಳು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಈ ಕುರಿಗಳೆಲ್ಲಾ ವಸಂತ್ ಜಾವೇದ್ ಅವರಿಗೆ ಸೇರಿದ್ದಾಗಿದೆ. ವಸಂತ್ ಜಾವೇದ್ ಕುರಿಗಳನ್ನು ಮೇಯಿಸಿಕೊಂಡು ಮನೆಕಡೆಗೆ ಹೊಡೆದುಕೊಂಡು ಬರುತ್ತಿದ್ದರು. ಈ ವೇಳೆ ಚಿಂಚಲಿ ಪಟ್ಟಣದ ರೈಲು ನಿಲ್ದಾಣ ಸಮೀಪವಾಗಿದೆ. ಆದರೆ ವಂಸತ್ ರೈಲನ್ನು ಗಮನಿಸಿದೆ ಕುರಿಗಳನ್ನು ಮುಂದೆ ಸಾಗಲು ಬಿಟ್ಟಿದ್ದಾನೆ. ಇದೇ ಅನಾಹುತಕ್ಕೆ ಕಾರಣವಾಗಿದೆ.

ಬೆಳಗಾವಿಯಿಂದ ಮೀರಜ್ ಕಡೆಗೆ ಸಾಗುತ್ತಿದ್ದ ಜೋದ್ ಪುರ್ ಎಕ್ಸ್‌ಪ್ರೆಸ್ ಟ್ರೈನಿಗೆ ಕುರಿಗಳು ಸಿಲುಕಿ ಸಾವನ್ನಪ್ಪಿವೆ. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇನ್ನು ಕುರಿಗಳನ್ನು ನೆನೆದು ಕುರಿಗಾಯಿ ವಸಂತ್ ಜಾವೇದ್ ಕಣ್ಣೀರು ಹಾಕುತ್ತಿದ್ದಾರೆ.

