ಸ್ವಾಮೀಜಿ ಹುಟ್ಟುಹಬ್ಬಕ್ಕೆ ವೇದಿಕೆ ನಿರ್ಮಾಣ : ಶಾಲಾ ಆವರಣದಲ್ಲಿ 150 ಮರಗಳ‌ ಮಾರಣಹೋಮ..!

suddionenews
1 Min Read

ಧಾರವಾಡ: ಸ್ವಾಮೀಜಿಯೊಬ್ಬರ ಹುಟ್ಟುಹಬ್ಬಕ್ಕೆ ಬೃಹತ್ ವೇದಿಕೆ ನಿರ್ಮಾಣ ಮಾಡಲು 150 ಮರಗಳ ಮಾರಣ ಹೋಮ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಜಿಲ್ಲೆಯ ಮನಗುಂಡಿ ಗ್ರಾಮದಲ್ಲಿ ನಡೆದಿದೆ.

ಇದೇ ತಿಂಗಳ 13ರಂದು ಮನಗುಂಡಿ ಗ್ರಾಮದ ಮಹಾಮನಿ ಬಸವಾನಂದಿ ಸ್ವಾಮೀಜಿಯ ಹುಟ್ಟುಹಬ್ಬವಿದೆ. 50ನೇ ವಸಂತಕ್ಕೆ ಕಾಲಿಎಉತ್ತಿದ್ದು, ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆ ಸ್ವಾಮೀಜಿಯ ದೊಡ್ಡ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಆಗಮಿಸಲಿದ್ದಾರೆ. ಹೀಗಾಗಿ ಶಾಲಾ ಆವರಣದಲ್ಲೇ ದೊಡ್ಡ ಪೆಂಡಾಲ್ ಹಾಕಿ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದಾರೆ.

ಪೆಂಡಾಲ್ ಹಾಕುವುದಕ್ಕೋಸ್ಕರ ಶಾಲಾ ಆವರಣದಲ್ಲಿದ್ದ 150 ಮರಗಳನ್ನ ಕಡಿದಿದ್ದಾರೆ. ವಿವಿಧ ಬಗೆಯ ಗಿಡಗಳನ್ನ ನೆಡಲಾಗಿತ್ತು. ಗ್ರಾಮ ಪಂಚಾಯತ್ ಸದಸ್ಯ ಪುಂಡಲೀಕ ನೇತೃತ್ದಲ್ಲೇ ಕಡಿಯಲಾಗಿದೆ ಎನ್ನಲಾಗಿದೆ. ಈ ಗಿಡಗಳನ್ನ ನರೇಗಾ ಯೋಜನೆಯಲ್ಲಿ 4 ಲಕ್ಷ ಹಣ ಖರ್ಚು ಮಾಡಿ ನೆಡಲಾಗಿತ್ತು. ಆದ್ರೆ ಅರಣ್ಯ ಇಲಾಖೆಗೆ ಒಂದು ಮಾಹಿತಿಯನ್ನು ನೀಡದೆ ಕಡಿಯಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *