ಆಂಧ್ರಪ್ರದೇಶ: ಇವತ್ತು ಮಕರ ಸಂಕ್ರಾಂತಿ ಹಬ್ಬ. ಎಲ್ಲೆಡೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಹಬ್ಬದಂದು ಕೆಲವೊಂದು ಕಡೆ ಕೆಲವೊಂದು ಆಚರಣೆಗಳನ್ನು ಮಾಡಲಾಗುತ್ತದೆ. ಆಂಧ್ರಪ್ರದೇಶದಲ್ಲಿ ಹಬ್ಬದ ಪ್ರಯುಕ್ತ ಜಲ್ಲಿಕಟ್ಟು ಸ್ಪರ್ಧೆ ಏರ್ಪಡಿಸಲಾಗಿತ್ತು. ಆದರೆ ಅದರಿಂದ ಯುವಕರು ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಏರ್ಪಡಿಸಲಾಗಿತ್ತು. ಅದ್ಧೂರಿ ಆಚರಣೆಯಲ್ಲಿ ಗೂಳಿ ಹಿಡಿಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಚಿತ್ತೂರಿನ ಜನತೆ ನೋಡಲು ಉತ್ಸುಕರಾಗಿದ್ದರೆ, ಯುವಕರು ಗೂಳಿ ಹಿಡಿಯಲು ಉತ್ಸುಕರಾಗಿದ್ದರು. ಸ್ಪರ್ಧೆ ಆರಂಭವಾಯಿತು, ಯುವಕರು ಗೂಳಿ ಹಿಡಿಯಲು ಶುರು ಮಾಡಿದರು.
ಆದರೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹದಿನೈದು ಯುವಕರು ಗಂಭೀರ ಸ್ಥಿತಿ ತಲುಪಿದ್ದಾರೆ. ರಭಸವಾಗಿ ಬರುತ್ತಿದ್ದಂತ ಗೂಳಿಗಳು ಯುವಕರನ್ನು ಗುದ್ದಿಕೊಂಡು ಹೋಗಿವೆ. ಸದ್ಯ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ತಮಿಳುನಾಡಿನಲ್ಲಿ ಸಂಕ್ರಾಂತಿ ಸಂಭ್ರಮದ ಜೊತೆಗೆ ಜಲ್ಲಿಕಟ್ಟು ಸ್ಪರ್ಧೆ ಕೂಡ ಶುರುವಾಗುತ್ತೆ. ಇವತ್ತಿನಿಂದ ಮೂರು ದಿನಗಳ ಕಾಲ ನಡೆಯುವ ಈ ಸ್ಪರ್ಧೆಯಲ್ಲಿ 800 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ.