ಬೆಳಗಾವಿ: ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ವೇಳೆ ಕಲಾಪಕ್ಕೆ ಅಡ್ಡಿಯುಂಟು ಮಾಡಿದ ಕಾರಣಕ್ಕೆ 14 ಜನ ಕಾಂಗ್ರೆಸ್ ಸದಸ್ಯರನ್ನ ಸಭಾಪತಿ ಅಮಾನತು ಮಾಡಿರುವ ಘಟನೆ ನಡೆದಿದೆ.
ಬಿಜೆಪಿ ಸಚಿವರೊಬ್ಬರ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಿದ ಆರೋಪವಿದೆ. ಇದಕ್ಕೆ ಸಂಬಂಧಿಸಿದಂತೆ ಕಲಾಪದಲ್ಲಿ ಸದ್ದು ಮಾಡಲಾಗಿತ್ತು. ಆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ರು. ಇದಕ್ಕೆ ಸಭಾಪತಿ ತೇಜಸ್ವಿನಿ ರಮೇಶ್ ಇದು ಇಲ್ಲಿ ಚರ್ಚೆ ಬೇಡ. ಕೇಸ್ ಹೈಕೋರ್ಟ್ ನಲ್ಲಿದೆ ಎಂದರು.
ಆದರೂ ಈ ವಿಚಾರವಾಗಿ ಚರ್ಚೆಗೆ ಅವಕಾಶ ಕೊಡುವಂತೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಸದನದ ಬಾವಿಗಿಳಿದು ಹೋರಾಟ ನಡೆಸಿದರು. ಸಚಿವರಾದ ಸೋಮಣ್ಣ ಮತ್ತು ಮಾಧುಸ್ವಾಮಿ ಕಾಂಗ್ರೆಸ್ ಸದಸ್ಯರ ವಿರುದ್ಧ ಹರಿಹಾಯ್ದರು. ಈ ಬಗ್ಗೆ ಚರ್ಚೆ ಬೇಡ ಅಂತ ಸಭಾಪತಿ ಕೂಡ ತಿಳಿ ಹೇಳಿದರು. ಬಿಡದ ಕಾರಣ ಕಾಂಗ್ರೆಸ್ ಸದಸ್ಯರನ್ನ ಅಮಾನತು ಮಾಡಿ ಸಭಾಪತಿ ಹೊರಟ್ಟಿ ಆದೇಶ ಹೊರಡಿಸಿದರು.