ರಷ್ಯಾ, ಉಕ್ರೇನ್ ಮೇಲೆ ಯುದ್ಧವನ್ನ ಮುಂದುವರೆಸಿದ. ಆದ್ರೆ ಈ ಯುದ್ಧ ಬೇಡ ಎಂದು ರಷ್ಯಾದ ಜನತೆಯೇ ಹೇಳುತ್ತಿದ್ದಾರೆ. ರಷ್ಯಾ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದನ್ನ ಖಂಡಿಸಿ ಪ್ರತಿಭಟನೆ ನಡೆಸಯತ್ತಿದ್ದಾರೆ.
ಉಕ್ರೇನ್ ಮೇಲೆ ನಡೆಯುತ್ತಿರುವ ಯುದ್ಧವನ್ನ ವಿರೋಧಿಸಿ ರಷ್ಯಾದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ನೀವು ನಡೆಸುತ್ತಿರುವ ಯುದ್ಧದಿಂದ ನಾವೂ ಸಂಕಷ್ಟಕ್ಕೆ ಈಡಾಗಿದ್ದೇವೆ. ಒಂದು ಕಡೆ ಹಣವೂ ಸಿಕ್ತಿಲ್ಲ, ಜೀವನ ನಡೆಸಲು ಕಷ್ಟವಾಗ್ತಾ ಇದೆ. ಹೀಗಾಗಿ ಯುದ್ಧ ಬೇಡ ಎಂದು ಅಲ್ಲಿನ ಜನ ಸರ್ಕಾರದ ವಿರುದ್ಧ ಯುದ್ಧ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಮಾಡುವ 14 ಸಾವಿರ ಜನರನ್ನ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಷ್ಯಾದ ಮೇಲೆ ಆರ್ಥಿಕ ಸಂಕಷ್ಟ ಎದುರಾಗುತ್ತ ಎಂಬ ಭಯ ಅಲ್ಲಿನ ಜನರಿಗೂ ಶುರುವಾಗಿದೆ. ವಿಮಾನಯಾನ ರದ್ದಾಗಿದೆ. ಯೂರೋಪ್ ರಾಷ್ಟ್ರಗಳಿಗೂ ತೆರಳೋದಕ್ಕೆ ಆಗುತ್ತಿಲ್ಲ. ಯೂರೋಪ್, ಸರ್ಬೀಯಾಗೆ ತೆರಳೋದಕ್ಕೂ ವಿಮಾನಗಳಿಲ್ಲ. ಯಾಕಂದ್ರೆ ಅಲ್ಲಿನ ಸರ್ಕಾರ ರಷ್ಯಾದ ವಿಮಾನ ಹಾರಾಟವನ್ನ ನಿಷೇಧ ಮಾಡಿದೆ.
ಇದೆಲ್ಲವನ್ನು ನೋಡ್ತಿದ್ರೆ ಈ ಯುದ್ಧ ಯಾರಿಗೂ ಬೇಡವಾಗಿದೆ. ಆದ್ರೆ ರಷ್ಯಾ ತನ್ನ ಹಠವನ್ನ ಬಿಡುತ್ತಿಲ್ಲ. ಅತ್ತ ಉಕ್ರೇನ್ ಅಕ್ಷರಶಃ ಸ್ಮಶಾನವಾದಂತಾಗಿದೆ. ಸಾಕಷ್ಟು ನಾಗರಿಕರು ಸಾವನ್ನಪ್ಪಿದ್ದಾರೆ, ಮಕ್ಕಳನ್ನ ಕಾಪಾಡೋದಕ್ಕೆ ಪೋಷಕರು ಹರಸಾಹಸ ಪಡುತ್ತಿದ್ದಾರೆ. ಕುಡಿಯೋದಕ್ಕೆ ನೀರು ಸಿಗದೆ, ತಿನ್ನೋಕೆ ಅನ್ನವೂ ಸಿಗದೆ ಅಲೆದಾಟ ನಡೆಸುತ್ತಿದ್ದಾರೆ ಉಕ್ರೇನ್ ಜನ.