ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ,(ಜ.03) : ಲಸಿಕೆಯನ್ನು ಪಡೆಯಲು ಯಾವುದೇ ರೀತಿಯ ಆತಂಕ ಬೇಡ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕಿದಾಗ ಎಲ್ಲಾ ಶಾಸಕರು, ಸಚಿವರು ವ್ಯಾಕ್ಸಿನ್ ಹಾಕಿಕೊಂಡಾಗ ಜನರಿಗೆ ಭರವಸೆ ಬಂದು ನಂತರ ವ್ಯಾಕ್ಸಿನ್‍ಗೆ ಬೇಡಿಕೆ ಹೆಚ್ಚಾಯಿತು. ಸುಮಾರು 1 ಮತ್ತು 2 ಡೋಸ್ ವ್ಯಾಕ್ಸಿನ್ ಹಾಕಿ ಒಟ್ಟು 140 ಕೋಟಿ ವ್ಯಾಕ್ಸಿನ್ ಹಾಕಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ಶಾಸಕರು ತಿಳಿಸಿದರು.
140 ಕೋಟಿ ವ್ಯಾಕ್ಸಿನ್ ಉಚಿತವಾಗಿ ನೀಡಿದ ಏಕೈಕ ದೇಶ ಭಾರತ ಎಂದು ಹೆಮ್ಮೆಯಿಂದ ಹೇಳುತ್ತೇನೆ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದ್ದರು ಸಹ ಸಾಧ್ಯವಾದಷ್ಟು ರಕ್ಷಣೆ ಮಾಡುವ ಕಡೆಗೆ ಒತ್ತು ನೀಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಇಟ್ಟಿರುವ ಪ್ರೀತಿಗೆ ಬೇರೆ ಬೇರೆ ರಾಷ್ಟ್ರದಿಂದ ವ್ಯಾಕ್ಸಿನ್ ಸರಬರಾಜು ಮಾಡಿದ್ದು ಸಾಕ್ಷಿಯಾಗಿದೆ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ಒಮಿಕ್ರಾನ್ ಹೆಚ್ಚಾಗುತ್ತಿದ್ದು ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಯನ್ನು ಸರ್ಕಾರದಿಂದ ಮಾಡಿಕೊಂಡಿದ್ದೇವೆ. ಫ್ರೇಂಟ್ ಲೈನ್ ವರ್ಕರ್‍ಗೆ 10 ತಾರೀಖಿನಿಂದ ಬುಸ್ಟರ್ ಡೋಸ್ ನೀಡಲಾಗುತ್ತದೆ ಎಂದರು.
ಜನರು ಎಲ್ಲಾರೂ ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವ ಮೂಲಕ ಕಡ್ಡಾಯವಾಗಿ ಕೋವಿಡ್ ತಡೆಯುವ ಕೆಲಸ ಎಲ್ಲಾರ ಕಡೆಯಿಂದ ಸರ್ಕಾರದ ಆದೇಶ ಪಾಲಿಸಿ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಕೋವಿಡ್ ನಿಯಂತ್ರಣಕ್ಕೆ ಬ್ರಂಡ್ ಅಂಬಸೇಡರ್ ರೀತಿಯಲ್ಲಿ ಮಕ್ಕಳು ಕೆಲಸ ಮಾಡಬೇಕು. ನಿಮ್ಮ ತಂದೆ ತಾಯಿಗಳು ಹೊರಗಡೆ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಅವರಿಗೆ ಕೋವಿಡ್ ಪಾಠ ಮಾಡಿ ಎಂದು ತಿಳಿಸಿದರು. ಕುಟುಂಬಕ್ಕೆ ಮತ್ತು ಊರಿಗೆ ಕೋವಿಡ ಕಷ್ಟ ಹೇಳಿ ಜಾಗೃತಿಗೊಳಿಸಿ ಎಂದರು. ಕೋವಿಡ್ ವ್ಯಾಕ್ಸಿನ್ ನಿಂದ ಭಯಗೊಳ್ಳಬೇಡಿ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಣಧಿಕಾರಿ ನಂದಿನಿದೇವಿ, ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿ ರಾಧಿಕಾ.ತಹಶೀಲ್ದಾರ್ ಸತ್ಯನಾರಾಯಣ ಜಿಲ್ಲಾ ಅರೋಗ್ಯ ಅಧಿಕಾರಿ ರಂಗನಾಥ್, ಟಿಹೆಚ್‍ಓ. ಗಿರೀಶ್, ಜಿಲ್ಲಾ ಆಸ್ಪತ್ರೆ ಸರ್ಜನ್ ಬಸವರಾಜ್ ಆರ್.ಸಿ.ಎಚ್.ಅಧಿಕಾರಿ ಕುಮಾರಸ್ವಾಮಿ, ಬಿಇಓ ಬಸವರಾಜಯ್ಯ, ಪ್ರಾಂಶುಪಾಲರಾದ ನಾಗರಾಜ್ ಉಪ ಪ್ರಂಶುಪಾಲರಾದ ಕರಿಯಪ್ಪ ಭಾಗವಹಿಸಿದ್ದರು.