ಬೆಂಗಳೂರು: ಹುಲಿ ಉಗುರನ್ನು ಪೆಂಡೆಂಟ್ ಆಗಿ ಬಳಸಿಕೊಂಡಿದ್ದ ವರ್ತೂರ್ ಸಂತೋಷ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನವೆಂಬರ್ 6ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಂತೋಷ್ ಅವರನ್ನು ಅರಣ್ಯಾಧಿಕಾರಿಯನ್ನು 2ನೇ ಎಸಿಜೆಎಂ ಕೋರ್ಟ್ ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸುತ್ತಾರೆ. ವಿಚಾರಣೆ ನಡೆಸಿದ ನ್ಯಾಯಾಧೀಶರು ಸಂತೋಷ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ವರ್ತೂರ್ ಸಂತೋಷ್ ಅವರನ್ನು ಬಂಧಿಸಿದ ಬಳಿಕ ವಿಚಾರಣೆ ನಡೆಸಲಾಗಿದೆ. ಅದು ನಿಜವಾದ ಹುಲಿಯ ಉಗುರು ಎಂದು ಗೊತ್ತಾಗಿದೆ. ಇಂದು ಕೋರ್ಟ್ ಗೆ ಹಾಜರುಪಡಿಸಲು ದಸರಾ ರಜೆ ಇತ್ತು. ಹೀಗಾಗಿ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಗಿತ್ತು. ಹದಿನಾಲ್ಕು ದಿನಗಳ ಬಳಿಕ ಮತ್ತೆ ವಿಚಾರಣೆ ನಡೆಸಿ, ಮುಂದಿನ ತೀರ್ಮಾನ ನೀಡಲಾಗುತ್ತದೆ.
ವರ್ತೂರ್ ಸಂತೋಷ್ ಹಸು ತಳಿಗಳನ್ನು ಸಾಕುವ ಮೂಲಕ ಫೇಮಸ್ ಆಗಿದ್ದರು. ಹಳ್ಳಿಯಲ್ಲಿ ಹಸುಗಳ ಪ್ರದರ್ಶನ ಕೂಡ ಮಾಡುತ್ತಾ ಇರುತ್ತಿದ್ದರು. ಈ ರೀತಿಯ ಫೇಮಸ್ ನಿಂದಾನೇ ಬಿಗ್ ಬಾಸ್ ಮನೆಗೂ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮನೆಯಲ್ಲೂ ಮೈತುಂಬಾ ಒಡವೆ ಹಾಕಿಕೊಂಡೆ ಇದ್ದರು. ಈ ಒಡವೆಯಲ್ಲಿ ಹುಲಿ ಉಗುರಿನ ಪೆಂಡೆಂಟ್ ಹಾಕಿಕೊಂಡು ಕಾಣಿಸಿಕೊಂಡಿದ್ದರು. ಇದನ್ನು ಗಮನಿಸಿದ ಶರತ್ ಬಾಬು ಎನ್ನುವವರು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಭಾನುವಾರ ರಾತ್ರಿಯೇ ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆಯಿಂದ ಅರೆಸ್ಟ್ ಮಾಡಿ, ಕರೆದುಕೊಂಡು ಹೋಗಿದ್ದಾರೆ.