ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಡಿ. 27 : ಚಿತ್ರದುರ್ಗದ ಬೃಹನ್ಮಠದ ಅನುಭವ ಮಂಟಪದಲ್ಲಿ ಜನವರಿ 18 ಮತ್ತು 19 ರಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 13ನೇ ಸಮ್ಮೇಳನವನ್ನು ನಡೆಸಲು ಸಕಲ ಸಿದ್ದತೆಯನ್ನು ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಸಿ.ಸೋಮೇಶೇಖರ್ ತಿಳಿಸಿದರು.
ಚಿತ್ರದುರ್ಗ ನಗರದ ಬೃಹನ್ಮಠದ ಆವರಣದಲ್ಲಿ ಇಂದು ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 13ನೇ ಸಮ್ಮೇಳನದ ಪೂರ್ವಬಾವಿ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಮಾಡಲಾಗುವುದು, ಇಲ್ಲಿಗೆ ಬರುವ ಜನರು ಶರಣ ಸಾಹಿತ್ಯದ ಬಗ್ಗೆ ಒಲವನ್ನು ಮೂಡಿಸಿಕೊಂಡು ಹೋಗಬೇಕು ಆ ರೀತಿಯಲ್ಲಿ ಮಾಡಲಾಗುವುದು ಎರಡು ದಿನ ನಡೆಯುವ ಈ ಸಮ್ಮೇಳನದಲ್ಲಿ ದಿನಕ್ಕೆ 30 ಸಾವಿರ ಜನತೆ ಬರುವ ನಿರೀಕ್ಷೆಯಿದೆ. ಈಗಾಗಲೇ ಈ ಸಮ್ಮೇಳನದಲ್ಲಿ ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಗೋಷ್ಟಿಗಳು ನಡೆಯಲಿವೆ ಎಂದರು.
2014ರಲ್ಲಿ ಶರಣ ಸಾಹುತ್ಯ ಸಮ್ಮೇಳನ ನಡೆದಿತ್ತು ತದ ನಂತರ ವಿವಿಧ ಕಾರಣಗಳಿಂದ ಸಮ್ಮೇಳನ ನಡೆಯದೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಪರಿಷತ್‍ನ್ನು ಜನತೆಗೆ ಪರಿಚಯಿಸಲಾಗುತ್ತಿದೆ ಇದರ ಬದಲು ಜಿಲ್ಲಾ ತಾಲ್ಲೂಕು ಸಮ್ಮೇಳನ. ದತ್ತಿ ಉಪನ್ಯಾಸಗಳು ನಿರಂತರವಾಗಿ ನಡೆಯುತ್ತಿದ್ದವು. ಪರಿಷತ್ ನಲ್ಲಿ 950ಕ್ಕೂ ಹೆಚ್ಚು ದತ್ತಿಗಳಿವೆ ಇವುಗಳೊಂದಿಗೆ ಪ್ರತಿ ತಾಲ್ಲೂಕು ಹೋಬಳಿಯಲ್ಲಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗಿದೆ. ಇದರಲ್ಲಿ ಶರಣ ವಿಚಾರ ಧಾರೆಗಳ ಬಗ್ಗೆ ಉಪನ್ಯಾಸಗಳು, ವಿಚಾರ ಸಂಕಿರಣಗಳು ನಡೆಯುತ್ತಿವೆ. ಇದಕ್ಕೆ ಮುಕುಟ ಪ್ರಾಯವಾಗುವ ಹಾಗೇ ಶರಣ ಸಾಹಿತ್ಯ ಸಮ್ಮೇಳನವನ್ನು ಮಾಡಬೇಕೆಂದು ನಿರ್ಧಾರ ಮಾಡಿ ಅದನ್ನು ಚಿತ್ರದುರ್ಗದಲ್ಲಿ ಮಾಡಲು ನಿರ್ಧಾರ ಮಾಡಲಾಯಿತೆಂದು ತಿಳಿಸಿದರು.
ಈ ಸಮ್ಮೇಳನವು ಗೌರವಾಧ್ಯಕ್ಷರಾದ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಹಾಗೂ ಗದಗದ ಡಂಬಳದ ತೋಂಟದಾರ್ಯ ಸಂಸ್ಥಾನದ ಡಾ.ತೋಂಟದ ಸಿದ್ದರಾಮ ಶ್ರೀಗಳ ನೇತೃತವದಲ್ಲಿ ನಡೆಯಲಿದೆ.ಈ ಸಮೇಳನಕ್ಕೆ ಚಿತ್ರದುರ್ಗ ಬೃಹನ್ಮಠದ ಆಡಳಿತ ಮಂಡಳಿಯ ಪೂರ್ಣ ಪ್ರಮಾಣದ ಸಹಕಾರ ಸಿಕ್ಕಿದೆ. ಸಮ್ಮೇಳನವು ಎರಡು ದಿನಗಳ ಕಾಲ ಚಿತ್ರದುರ್ಗದ ಅನುಭವ ಮಂಟಪದಲ್ಲಿ ನಡೆಯಲಿದೆ. ಜ. 18 ರಂದು ಸಮ್ಮೇಳನವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಉದ್ಘಾಟನೆ ಮಾಡುವುದಾಗಿ ಸಮ್ಮತಿಸಿದ್ದಾರೆ. ಸಚಿವರಾದ ಎಂ.ಬಿ.ಪಾಟೀಲ್ ರವರು ಸಹಾ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠದ ಮಠಾಧೀಶರು ಸಚಿವರಾದ ಸುಧಾಕರ್ ಸಂಸದರಾದ ಗೋವಿಂದ ಕಾರಜೋಳ, ಶಾಸಕರಾದ ವಿರೇಂದ್ರ ಪಪ್ಪಿ ಕೆ.ಎಸ್.ನವೀನ್ ಸೇರಿದಂತೆ ಇತರೆ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಈ ಸಮ್ಮೇಳನದಲ್ಲಿ ಸಾಂಸ್ಕøತಿಕ ನಾಯಕ ಬಸವಣ್ಣ, ಶರಣ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ, ಶರಣ ಸಾಹಿತ್ಯದತ್ತ ಯುವ ಜನಾಂಗ, ನಮ್ಮ ಪ್ರಾತಃ ಸ್ಮರಣಿಯರು ಇದರಲ್ಲಿ ಜಯದೇವ ಶ್ರೀಗಳು, ಸಿದ್ಧೇಶ್ವರ ಸ್ವಾಮಿ ಹಾಗೂ ನಾಯಕನಹಟ್ಟಿ ತಿಪ್ಪೇಸ್ವಾಮಿಯವರ ಬಗ್ಗೆ ಚಿಂತನೆ ನಡೆಯಲಿದೆ. ಶರಣರು ಪ್ರತಿಪಾದಿಸಿದ ವೈಚಾರಿಕತೆಯ ಪ್ರಜ್ಞೆಯ ಚಿಂತನೆಯ ಬಗ್ಗೆ, ಶರಣ ಸಾಹಿತ್ಯದ ಬಗ್ಗೆ ನಾಟಕ ಚಿಂತನೆ ಬಹಿರಂಗ ಅಧಿವೇಶನ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ-ಸಾಧನೆಯನ್ನು ಮಾಡಿದ ಗಣ್ಯರಿಗೆ ಸನ್ಮಾನ, ಸಂವಾz ಕಾರ್ಯಕ್ರಮ ನಡೆಯಲಿದೆ ಸಮಾರೋಪ ಸಮಾರಂಭಕ್ಕೆ ಕೇಂದ್ರ ಸಚಿವರಾದ ಸೋಮಣ್ಣರವರು ಆಗಮಿಸಲಿದ್ದಾರೆ.
ಶರಣ ಸಾಹಿತ್ಯಕ್ಕೆ ರಾಜ್ಯದ ವಿವೀಧ ಮಠಗಳು ಸಹಾ ಅನೇಕ ರೀತಿಯಲ್ಲಿ ಸೇವೆಯನ್ನು ಮಾಡುತ್ತಿವೆ, ಕಷ್ಠ ಕಾಲದಲ್ಲಿಯೂ ಸಹಾ ಮಠಗಳು ಶರಣ ಸಾಹಿತ್ಯದ ಬಗ್ಗೆ ತಮ್ಮದೇ ಆದ ಕೂಡುಗೆಯನ್ನು ನೀಡುತ್ತಾ ಬಂದಿವೆ ಅವುಗಳನ್ನು ಈ ಸಮಯದಲ್ಲಿ ಸ್ಮರಣೆ ಮಾಡಲಾಗುವುದು ಎಂದರು.
ಗೋಷ್ಟಿಯಲ್ಲಿ ಭಾಗವಹಿಸಿದ್ದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ್ ಶ್ರೀಗಳು ಮಾತನಾಡಿ, ಜ. 18 19 ರಂದು ನಮ್ಮ ಬೃಹನ್ಮಠದಲ್ಲಿ ನಡೆಯಲಿರುವ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ರೀತಿಯಾದ ಸಹಾಯ ಮತ್ತು ಸಹಕಾರವನ್ನು ಹಾಗೂ ಇಲ್ಲಿಗೆ ಬರುವ ಜನರಿಗೆ ಊಟ ಹಾಗೂ ವಸತಿಯನ್ನು ನೀಡಲಾಗುವುದು. ನಮ್ಮ ಬೃಹನ್ಮಠದಲ್ಲಿ ಶರಣ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮ ಸೌಭಾಗ್ಯವಾಗಿದೆ ಇದಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದೆಂದು ತಿಳಿಸಿದರು.
ಗೋಷ್ಟಿಯಲ್ಲಿ ಗುರುಮಠಕಲ್ ಶಾಂತವೀರ ಗುರು ಮುರುಘರಾಜೇಂದ್ರ ರಾಜೇಂದ್ರ ಮಹಾಸ್ವಾಮಿಗಳು, ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷರು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಕೆ.ಎಂ.ವಿರೇಶ್, ಡಾ. ಹೋನ್ನಲಿಂಗಯ್ಯ, ಖಂಜಾಚಿ ಎಸ್. ಷಣ್ಮುಖಪ್ಪ, ಹಂಪಯ್ಯ ಸಾರಂಗಮಠ, ಅಪ್ಪರಾವ್ ಅಕ್ಕೂಣಿ ಷಡಾಕ್ಷರಯ್ಯ, ರುದ್ರಮೂರ್ತಿ ಗಣೇಶಯ್ಯ ಭಾಗವಹಿಸಿದ್ದರು.