ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ. ಜ.07 : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಇವರ ವತಿಯಿಂದ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಬರುವ ಜನವರಿ 18 ಮತ್ತು19 ನೇ ತಾರೀಖು ಹಮ್ಮಿಕೊಂಡಿರುವ ಹದಿಮೂರನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಬೀದರ್‌ನ ಸಿದ್ದರಾಮ ಶರಣರು ಬೆಲ್ದಾಳ ಅವರನ್ನು ಸಮ್ಮೇಳನದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಬೆಂಗಳೂರು ಜಯನಗರದ ಸುತ್ತೂರು ಮಠದಲ್ಲಿ ಭೇಟಿಯಾಗಿ ಆಮಂತ್ರಣ ಪತ್ರಿಕೆ ಹಾಗೂ ಸಮ್ಮೇಳನದ ಪತ್ರವನ್ನು ನೀಡಿ ಶಾಲು ಹೊದಿಸಿ,ಹಾರ ಹಾಕಿ, ಫಲ ನೀಡಿ ಅಭಿಮಾನ ಪೂರ್ವಕವಾಗಿ ಆಮಂತ್ರಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಪ್ರಧಾನ ಕಾರ್ಯದರ್ಶಿ ಡಾ.ಕೆ .ಎಂ.ವೀರೇಶ್, ಖಜಾಂಚಿ ಹಂಪಯ್ಯ ಚಿಕ್ಕಪ್ಪನಹಳ್ಳಿ ಸೋಮಶೇಖರ್, ಯೋಗ ಗುರು ವೈದ್ಯ ಶ್ರೀ ಚೆನ್ನಬಸವಣ್ಣ, ಸಮ್ಮೇಳನದ ಸ್ವಾಗತ ಸಮಿತಿಯ ಖಜಾಂಚಿ ಎಸ್. ಷಣ್ಮುಖಪ್ಪ , ಅಖಿಲ ಭಾರತ ವೀರಶೈವ ಮಹಾಸಭಾದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಮಹಡಿ ಶಿವಮೂರ್ತಿ, ಬಿ .ಎಂ. ರುದ್ರೇಶ್ ಸೇರಿದಂತೆ ಬೆಲ್ದಾಳ ಶರಣರ ಅನುಯಾಯಿಗಳು, ಅಭಿಮಾನಿಗಳು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.