Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿದ್ಧಗಂಗಾ ಶ್ರೀಗಳ 116ನೇ ಹುಟ್ಟುಹಬ್ಬ : 116 ಮಕ್ಕಳಿಗೆ ಶ್ರೀಗಳ ಹೆಸರು ನಾಮಕರಣ

Facebook
Twitter
Telegram
WhatsApp

 

ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಹುಟ್ಟುಹಬ್ಬ ಇಂದು. 116ನೇ ಹುಟ್ಟುಹಬ್ಬವನ್ನು ಮಠದಲ್ಲಿ ಆಚರಣೆ ಮಾಡಲಾಗುತ್ತದೆ. ಇಂದು ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಮಾಡಲಾಗಿದೆ. ವಿವಿಧ ಮಠಾಧೀಶರ ಸಮ್ಮುಖದಲ್ಲಿ ಪೂಜೆ, ಪುನಸ್ಕಾರಗಳನ್ನು ಮಾಡಲಾಗಿದೆ.

ಗದ್ದುಗೆಗೆ ಪೂಜೆ ಪುನಸ್ಕಾರ ಮಾಡಿದ್ದು, ಫಲ ಪುಷ್ಪಗಳಿಂದ ಅಲಂಕಾರ ಮಾಡಲಾಗಿದೆ. ಇಂದು ಬೆಳಗ್ಗೆಯೇ ರುದ್ರಾಕ್ಷಿ ಮಂಟಪದಲ್ಲಿ ಶ್ರೀಗಳ ಪ್ರತಿಮೆ ಇಟ್ಟು ಮೆರವಣಿಗೆ ಮಾಡಿದ್ದಾರೆ. ಇಂದು ಬೆಳಗ್ಗೆ ವಾಸಲ ವೇದಿಕೆಯಲ್ಲಿ ಕಾರ್ಯಕ್ರಮ ಕೂಡ ನಡೆದಿದೆ. ಸಿದ್ಧಗಂಗಾ ಮಠದ ಶ್ರೀ, ಸುತ್ತೂರು ಮಠದ ಶ್ರೀಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ನೆರವೇರಿದೆ.

ರಾಜ್ಯಪಾಲ ಥಾವರ್ ಚಂದ್, ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. 116 ಮಕ್ಕಳಿಗೆ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಗಿದೆ. ಜೊತೆಗೆ ಆ ಮಕ್ಕಳಿಗೆ ತೊಟ್ಟಿಲು, ಬಟ್ಟೆಯನ್ನು ವಿತರಣೆ ಮಾಡಲಾಗಿದೆ. ಶಿವಕುಮಾರ ಸ್ವಾಮೀಜಿಗಳ ಹುಟ್ಟುಹಬ್ಬಕ್ಕೆ ರಾಜ್ಯದ ನಾನ ಮೂಲೆಯಿಂದ ಬಂದಿದ್ದಾರೆ. ಶ್ರೀಗಳ ಗದ್ದುಗೆಯ ದರ್ಶನ ಪಡೆದು, ಭಕ್ತಿಯಿಂದ ನಮಸ್ಕರಿಸಿ, ಪ್ರಸಾದ ಸ್ವೀಕರಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಈ ಹಣ್ಣುಗಳನ್ನು ತಿನ್ನಿ…!

ಸುದ್ದಿಒನ್ : ದೇಹದಲ್ಲಿ ಅನೇಕ ಪ್ರಮುಖವಾದ ಭಾಗಗಳಿವೆ. ಪ್ರತಿಯೊಂದು ಭಾಗವೂ ಮುಖ್ಯವಾಗಿದೆ. ಅದರಲ್ಲೂ ಮೆದುಳು, ಕಿಡ್ನಿ, ಹೃದಯ, ಲಿವರ್ ಹೆಚ್ಚು ಮುಖ್ಯ. ದೇಹದ ಈ ಭಾಗಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ ದೇಹದ ಆರೋಗ್ಯದ ಮೇಲೆ

ಈ ರಾಶಿಯವರ ವಿವಾಹ ಯೋಗ ಮತ್ತು ಇನ್ನಿತರ ಕೆಲಸ ಕಾರ್ಯಕ್ಕೆ ವಿಘ್ನಗಳೇ ಉಂಟಾಗುವ ಸಾಧ್ಯತೆ ಹೆಚ್ಚು

ಈ ರಾಶಿಯವರ ವಿವಾಹ ಯೋಗ ಮತ್ತು ಇನ್ನಿತರ ಕೆಲಸ ಕಾರ್ಯಕ್ಕೆ ವಿಘ್ನಗಳೇ ಉಂಟಾಗುವ ಸಾಧ್ಯತೆ ಹೆಚ್ಚು, ಬುಧವಾರ ರಾಶಿ ಭವಿಷ್ಯ -ಜೂನ್-19,2024 ಸೂರ್ಯೋದಯ: 05:46, ಸೂರ್ಯಾಸ್ತ : 06:48 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ

ಎಂಬಿ ಪಾಟೀಲ್-ಕುಮಾರಸ್ವಾಮಿ ಭೇಟಿಗೆ ಡೇಟ್ ಫಿಕ್ಸ್ : ರಾಜ್ಯಕ್ಕೆ ಏನೆಲ್ಲಾ ಲಾಭವಾಗಬಹುದು..?

ಬೆಂಗಳೂರು : ಉದ್ಯೋಗ ಬಹಳ ಮುಖ್ಯವಾಗಿದೆ. ಎಷ್ಟೋ ಜನ ಉದ್ಯೋಗ ಸಿಗದೆ ಯುವಕರೇ ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಬಾರಿ ಉದ್ಯೋಗ ಸೃಷ್ಠಿಯ ನಿರೀಕ್ಷೆ ಇದೆ. ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಸಚಿವ ಎಂ.ಬಿ ಪಾಟೀಲ್

error: Content is protected !!