ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕೊರಿನಾದಿಂದ ಸಾವನ್ನಪ್ಪುತ್ತಿದ್ದವರ ಸಂಖ್ಯೆ ಇಂದು ಕಿಂಚ ಕಡಿಮೆಯಾಗಿದೆ. ಕಳೆದ 24 ಗಂಟೆಯ ವರದಿಯಲ್ಲಿ 8 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಯಲ್ಲಿ 30499 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್, 126403 RTPCR ಟೆಸ್ಟ್ ಸೇರಿದಂತೆ ಒಟ್ಟು 156902 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 1117 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅದರಲ್ಲಿ 358 ಜನ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಇನ್ನು ಕೊರೊನಾದಿಂದ ಪ್ರತಿದಿನ 20 ಜನರ ಮೇಲೆ ಸಾವನ್ನಪ್ಪುತ್ತಾ ಇದ್ರು. ಇಂದು ಡೆತ್ ರೇಟ್ ಕಡಿಮೆಯಾಗಿದ್ದು, ಅದರಲ್ಲಿ 8 ಜನ ಸಾವನ್ನಪ್ಪಿದ್ದಾರೆ. ಉಳಿದಂತೆ ಕೊರೊನಾವನ್ನ ಜಯಿಸಿ 1354 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.