ಮೈಸೂರು: ಹೆಚ್ ಡಿ ಕೋಟೆಯ ಹಾಲಾಳು ಗ್ರಾಮದ ಸಮೀಪ ಡಾ. ವಿಷ್ಣು ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಈ ಸ್ಮಾರಕ ಇಂದು ಲೋಕಾರ್ಪಣೆಯಾಗುತ್ತಿದೆ. ಶಾಸಕ ಜಿ ಟಿ ದೇವೇಗೌಡ ಅವರು ಸ್ಮಾರಕ ಉದ್ಘಾಟನೆ ಮಾಡಲಿದ್ದಾರೆ. ಅತಿಥಿಗಳಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಶ್ರೀನಿವಾಸ್ ಪ್ರಸಾದ್ ಭಾಗಿಯಾಗಲಿದ್ದಾರೆ. ಸಮಾರಂಭದಲ್ಲಿ ವಿಷ್ಣುವರ್ಧನ್ ಅವರ ಕುಟುಂಬವೂ ಇರುತ್ತದೆ.
ಇನ್ನು ಅಭಿಮಾನಿಗಳು ಈಗಾಗಲೇ ಬೆಂಗಳೂರಿನಿಂದ ದೊಡ್ಡ ದೊಡ್ಡ ಬ್ಯಾನರ್ ನೊಂದಿಗೆ ಮೈಸೂರಿನ ಸ್ಮಾರಕಕ್ಕೆ ಹೊರಟಿದ್ದಾರೆ. ಮೈಸೂರಿನಲ್ಲಿ ನಿರ್ಮಾಣವಾಗಿರುವ ಸ್ಮಾರಕಕ್ಕೆ ಐದು ಎಕರೆ ಪ್ರದೇಶವನ್ನು ಬಳಸಲಾಗಿದೆ. ಅದರಲ್ಲಿ ಮೂರು ಎಕರೆಯಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. 700 ಫೋಟೋ ಗ್ಯಾಲರಿ ಹಾಗೂ ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಇನ್ನು 240 ಸುಸಜ್ಜಿತ ಆಸನವನ್ನು ಮಾಡಲಾಗಿದೆ. ವಿಶಾಲವಾದ ಇದ್ಯಾನವನ ನೀರಿನ ಕಾರಂಜಿಯನ್ನು ಮಾಡಲಾಗಿದೆ. ಇದಕ್ಕೆ ಸುಮಾರು 11 ಕೋಟಿ ಖರ್ಚಾಗಿದೆ.
ಇನ್ನು ವಿಷ್ಣು ಸ್ಮಾರಕ ಕಟ್ಟಲು ಸತತ 13 ವರ್ಷಗಳಿಂದ ಹೋರಾಟ ನಡೆದಿದೆ. ಅಭಿಮಾನಿಗಳು ಕೂಡ ಪ್ರತಿ ವರ್ಷ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಇದ್ದರು. ಜೊತೆಗೆ ಬೆಂಗಳೂರಿನಲ್ಲೂ ಸ್ಮಾರಕ ಆಗಲೇಬೇಕು ಎಂದು ಈಗಲು ಪಟ್ಟು ಹಿಡಿದಿದ್ದಾರೆ.