24 ಗಂಟೆಯಲ್ಲಿ 103 ಪಾಸಿಟಿವ್.. 1 ಸಾವು..!

suddionenews
1 Min Read

ಮರೆತು ಹೋಗಿದ್ದ ಕೊರೊನಾ ಮತ್ತೆ ಜನರ ಆತಂಕಕ್ಕೆ ಕಾರಣವಾಗಿದೆ. ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿಯೇ ದಾಖಲಾಗುತ್ತಿದೆ. ಆರೋಗ್ಯ ಇಲಾಖೆ ಕೂಡ ಪ್ರತಿ ದಿನ ಟೆಸ್ಟ್ ಗಳನ್ನು ಮಾಡಲಾಗುತ್ತಿದೆ. ಅದರಂತೆ ಕಳೆದ 24 ಗಂಟೆಯಲ್ಲಿ 103 ಪಾಸಿಟಿವ್ ಕೇಸ್ ಗಳು ದೃಢಪಟ್ಟಿದೆ.

ಕಳೆದ 24 ಗಂಟೆಯಲ್ಲಿ 5607 RTPCR ಟೆಸ್ಟ್ ಮಾಡಲಾಗಿದ್ದು, 1655 RAT ಟೆಸ್ಟ್ ಮಾಡಲಾಗಿದೆ. ಇದರಲ್ಲಿ 103 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಕೊರೊನಾದಿಂದ ಒಂದು ಸಾವು ಸಂಭವಿಸಿದೆ. ಈ ಮೂಲಕ 479 ಪಾಸಿಟಿವ್ ಕೇಸ್ ಗಳು ಸಕ್ರಿಯವಾಗಿವೆ.

ಕೊರೊನಾ ಪಾಸಿಟಿವ್ ಬಂದವರಿಗೆ ಹೋಮ್ ಐಸೋಲೇಷನ್, ಹಾಸ್ಪಿಟಲ್ ನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸದ್ಯಕ್ಕೆ 422 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 57 ಜನ ಹಾಸ್ಪಿಟಲೈಸ್ ಆಗಿದ್ದಾರೆ. 19 ಜನ ಐಸಿಯುನಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *