ಒಡಿಶಾ ರೈಲು ದುರಂತ ನಡೆದು ಐದು ದಿನಗಳಾಗಿದೆ. ಈಗಾಗಲೇ ಅಪಘಾತವಾದ ಸ್ಥಳದಲ್ಲಿ ಎಲ್ಲವನ್ನು ತೆರವುಗೊಳಿಸಲಾಗಿದೆ. ಆ ಸ್ಥಳದಲ್ಲಿ ರೈಲು ಓಡಾಟಕ್ಕೂ ಈಗಾಗಲೇ ಅನುವು ಮಾಡಿಕೊಡಲಾಗಿದೆ. ಈ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 288. ಇಷ್ಟು ಮೃತದೇಹಗಳು ಸಿಕ್ಕಿದೆ. ಆದರೆ ಇನ್ನು 101 ಮೃತದೇಹಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ಕಾರ್ಯಾಚರಣೆಯೂ ನಡೆಯುತ್ತಿದೆ.
ಹೌರಾ ಚೆನ್ನೈ ಕೋರಮಂಡಲ್, ಯಶವಂತಪುರ ಎಕ್ಸ್ಪ್ರೆಸ್ ಹಾಗೂ ಗೂಡ್ಸ್ ರೈಲು ಗಾಡಿಗಳು ಡಿಕ್ಕಿ ಹೊಡೆದ ಪರಿಣಾಮ ಸಾವು ನೋವು ಸಂಭವಿಸಿತ್ತು. ರೈಲು ದುರಂತದ ಗಾಯಾಳುಗಳಿಗೆ ಹತ್ತಿರದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಇನ್ನು ಶವಗಳನ್ನು ಭುವನೇಶ್ವರ ಆಸ್ಪತ್ರೆ ಹಾಗೂ ಸಮೀಪದ ಶವಗಾರದಲ್ಲಿ ಇರಿಸಲಾಗಿದೆ.
ಸಹಾಯವಾಣಿ ಮತ್ತು ಕಂಟ್ರೋಲ್ ರೂಂಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನಿ ದೇಶದ ವಿವಿಧೆಡೆಯಿಂದ ಮೃತದೇಹಗಳ ಪತ್ತೆಗೆ ಬರುತ್ತಿದ್ದಾರೆ. ಇನ್ನು ಸತ್ತವರ ಮಾಹಿತಿಯನ್ನು ಆನ್ಲೈನ್ ನಲ್ಲೂ ಬಿಡಲಾಗಿದೆ. ಅವರ ಫೋಟೋ, ವಿಳಾಸಗಳನ್ನು ಆನ್ಲೈನ್ ಮೂಲಕ ನೀಡಲಾಗುತ್ತಿದೆ.