ನಮ್ಮ ಸಂಸ್ಕೃತಿ, ಭಾಷೆ, ವೈವಿಧ್ಯತೆ, ಜನ, ರಾಜ್ಯಗಳ ನಡುವೆ ಒಂದು ಸಂಬಂಧವಿದೆ. ಅದು ನಮ್ಮ ಹೆಮ್ಮೆ. ಕಾಶ್ಮೀರದಿಂದ ಕೇರಳದವರೆಗೆ, ಗುಜರಾತ್ ನಿಂದ ಪಶ್ಚಿಮ ಬಂಗಾಳದವರೆಗೆ ಭಾರತದ ವೈವಿಧ್ಯತೆ ಹರಡಿದೆ ಎಂದು ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಬಿಜೆಪಿ ಯುವ ಮೋರ್ಚಾ ಗರಂ ಆಗಿದೆ.

ಟ್ವೀಟ್ ವಿರುದ್ಧ ಅಸ್ಸಾಂ ನ ವಿವಿಧ ಠಾಣೆಗಳಲ್ಲಿ ಸಾವಿರಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿವೆ. ರಾಹುಲ್ ಗಾಂಧಿ ಕೆಳದಿನಗಳ ಹಿಂದೆ ಮಾಡಿರುವ ಟ್ವೀಟ್ ಆಕ್ಷೇಪಾರ್ಹವಾಗಿದೆ. ಹೀಗಾಗಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಯುವ ಮೋರ್ಚಾ ದೂರು ದಾಖಲಿಸಿದೆ ಎಂದು ಬಿಜೆಪಿ ಯುವ ಮೋರ್ಚಾದ ಮಾಧ್ಯಮ ಸಂಚಾಲಕರಾದ ಬಿಸ್ವಜಿತ್ ಖೌಂಡ್ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಅವರ ಟ್ವೀಟ್ ಪ್ರತ್ಯೇಕವಾದಿ ಮನಸ್ಥಿತಿಯನ್ನು ವ್ಯಕ್ತಪಡಿಸಿದೆ. ಇದು ಹಳೆಯ ಪಕ್ಷದ ಸಿದ್ಧಾಂತವನ್ನು ಮತ್ತೆ ತೋರಿಸುತ್ತದೆ. ಕಾಂಗ್ರೆಸ್ ಪಕ್ಷ ಭಾರತಕ್ಕೆ ಅಪಾಯ. ರಾಹುಲ್ ಗಾಂಧಿ ಭಾರತದ ದೊಡ್ಡ ಸಮಸ್ಯೆ ಎಂದಿರುವ ಬಿಸ್ವಜಿತ್, ಟ್ವೀಟ್ ಬಗ್ಗೆ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಎಲ್ಲವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

