ಹುಬ್ಬಳ್ಳಿಯಲ್ಲಿ ಸಿಕ್ತು 100 ವರ್ಷಗಳ ಹಳೆಯ ಪೆಟ್ಟಿಗೆ.. ಪಾಸ್ಬುಕ್, ಕೀಲಿ ಕೈ ಪತ್ತೆ..!

suddionenews
1 Min Read

ಹುಬ್ಬಳ್ಳಿ: ನಗರದಲ್ಲಿ ಕಾಮಾಗಾರಿ ವೇಳೆ ಹಳೆ ಲಾಕರ್ ವೊಂದು ಪತ್ತೆಯಾಗಿದೆ. ಆ ಲಾಕರ್ ನೋಡಿದ ಪ್ರತಿಯೊಬ್ಬರಿಗೂ ಆಶ್ಚರ್ಯ. ಯಾಕಂದ್ರೆ ನೂರು ವರ್ಷಗಳ ಹಳೆಯ ಲಾಕರ್ ಆಗಿತ್ತು. ಹೀಗಾಗಿ ಎಲ್ಲರಿಗೂ ಅದರಲ್ಲೇನಿದೆ ಎಂಬ ಕುತೂಹಲ ಸಹಜವಾಗಿತ್ತು.

ಚಿಟಗುಪ್ಪಿ ಆಸ್ಪತ್ರೆಯನ್ನ ನವೀಕರಣ ಮಾಡಲಾಗುತ್ತಿತ್ತು. ಈ ವೇಳೆ ಕಾಮಗಾರಿ ಜಾಗದಲ್ಲಿ ಹಳೆಯ ಲಾಕರ್ ಪತ್ತೆಯಾಗಿದೆ. ಬಳಿಕ ಅಲ್ಲಿದ್ದ ಸಿಬ್ಬಂದಿಗಳು ಪೊಲೀಸರ ಸಮ್ಮುಖದಲ್ಲು ಕಂಪನಿಯ ಕಾರ್ನಿಕರ ಸಹಾಯ ತೆಗೆದುಕೊಂಡು ಆ ಲಾಕರ್ ಓಪನ್ ಮಾಡಿಸಿದ್ದಾರೆ. ಆ ವೇಳೆ ಹಳೆ ಕಾಲದ ಕಡತಗಳು ಪತ್ತೆಯಾಗಿವೆ.

ನೂರು ವರ್ಷದ ಹಳೆಯದಾದ ಆ ಪೆಟ್ಟಿಗೆಯಲ್ಲಿ 1950 ಮತ್ತು 1952 ನಡುವೆ ನಡೆದಿದ್ದ ಅಂಚೆ ಕಚೇರಿಗೆ ಸಂಬಧಿಸಿದಂತ ಪತ್ರಗಳು ಆ ಪೆಟ್ಟಿಗೆಯಲ್ಲಿ ಸಿಕ್ಕಿವೆ. ಅಷ್ಟೇ ಅಲ್ಲ ಅದರೊಳಗೆ ಪಾಸ್ ಬುಕ್ ಹಾಗೂ ಕೀಲಿ ಕೈಗಳು ಸಿಕ್ಕಿವೆ. ಹಳೆ ಕಾಲದ ಮೌಲ್ಯದ ಪೈಸೆಗಳು ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *