ಚಿತ್ರದುರ್ಗ, (ಸೆ.27) : ದಾವಣಗೆರೆ ವಿಶ್ವವಿದ್ಯಾನಿಲಯದ 2021-22 ನೇ ಶೈಕ್ಷಣಿಕ ಸಾಲಿನ ಬಿ.ಇಡಿ ಕೋರ್ಸ್‍ನ 3ನೇ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು ಎಸ್.ಆರ್.ಎಸ್.ಶಿಕ್ಷಣ ಮಹಾವಿದ್ಯಾನಿಲಯದ ತೃತೀಯ ಸೆಮಿಸ್ಟರ್ ನಲ್ಲಿ 100% ರಷ್ಟು ಫಲಿತಾಂಶ ಪಡೆದಿದೆ. 71 ಪ್ರಶಿಕ್ಷಣಾರ್ಥಿಗಳಲ್ಲಿ 69 ವಿದ್ಯಾರ್ಥಿಗಳು ಅತ್ಯುನ್ನುತ ಶ್ರೇಣಿ, 02 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ತೃತೀಯ ಸೆಮಿಸ್ಟರ್ ನ ಕಾವ್ಯ. ಟಿ.ಎನ್. (PM ವಿಭಾಗ) 86.67%(520/600) ಅಂಕಗಳನ್ನು ಗಳಿಸಿದ್ದು, ಪ್ರಥಮ ಅತ್ಯುನ್ನುತ ಶ್ರೇಣಿ ಪಡೆದಿದ್ದಾರೆ.
ಸಿಂದು.ಎಸ್. (EH ವಿಭಾಗ) 86.33%(518/600) ಅಂಕಗಳನ್ನು ಗಳಿಸಿದ್ದು, ದ್ವಿತೀಯ ಅತ್ಯುನ್ನುತ ಶ್ರೇಣಿ ಪಡೆದಿದ್ದಾರೆ. ಹಾಗೂ ಮೇಘನ.ಎಂ (CB ವಿಭಾಗ) 86.17%(517/600) ತೃತೀಯ ಅತ್ಯುನ್ನುತ ಶ್ರೇಣಿಪಡೆದಿದ್ದಾರೆ.
ಉತ್ತಮ ಫಲಿತಾಂಶ ಪಡೆದುಕಾಲೇಜಿಗೆ ಕೀರ್ತಿ ತಂದವಿದ್ಯಾರ್ಥಿಗಳಿಗೆ ಎಸ್.ಆರ್.ಎಸ್.ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿಹಾಗೂ ಪ್ರಾಚಾರ್ಯರಾದ ಡಾ.ರವಿ.ಟಿ.ಎಸ್ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಹರ್ಷ ವ್ಯಕಪಡಿಸಿಅಭಿನಂದನೆಗಳನ್ನು ತಿಳಿಸಿದ್ದಾರೆ.