ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 10 : 2025-26 ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕೆ.ಎಂ.ಎಸ್. (ಬಾಪೂಜಿ) ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಶೇಕಡ 100% ಫಲಿತಾಂಶ ಬಂದಿರುತ್ತದೆ.

ಕು.ಲಕ್ಷ್ಮಿದೇವಿ ಆರ್.498(83%) ಅಂಕ ಗಳಿಸಿ ಮೊದಲನೆ ಸ್ಥಾನ, ಕು.ಯಶೋಧ.ಟಿ. 487(81%) ಅಂಕ ಗಳಿಸಿ ಎರಡನೇ ಸ್ಥಾನ ಹಾಗೂ ಕು. ಅರ್ಪಿತ.ಆರ್ 482(80%) ಅಂಕ ಗಳಿಸಿ ಮೂರನೇ ಸ್ಥಾನ ಪಡೆದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಶೇಕಡ 90% ಫಲಿತಾಂಶ ಬಂದಿದ್ದು, ಕು. ಅಶ್ವಿನಿ.ಕೆ 566(94%) ಅಂಕ ಗಳಿಸಿ ಮೊದಲನೆ ಸ್ಥಾನÀ, ಕು.ಚಂಚಲ.ಕೆ 558(93%) ಅಂಕಗಳಿಸಿ ಎರಡನೆ ಸ್ಥಾನ ಹಾಗೂ ಕು. ಭುವನೇಶ್ವರಿ.ಕೆ.ಎಂ. 538(89%) ಅಂಕಗಳಿಸಿ ಮೂರನೇ ಸ್ಥಾನ ಪಡೆದಿರುತ್ತಾರೆ.
ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಕೆ.ಎಂ.ವೀರೇಶ್, ನಿರ್ದೇಶಕರಾದ ಕೆ.ಎಂ.ಚೇತನ್, ಪ್ರಾಚಾರ್ಯರಾದ ಡಾ.ಮಂಜುಳ.ಕೆ, ಶ್ರೀ ವೀರಪ್ಪ.ಜಿ.ಎನ್, ಶ್ರೀ ಲೋಕೇಶ್ ಹಾಗೂ ಉಪನ್ಯಾಸಕರುಗಳು ಮತ್ತು ಕಾಲೇಜಿನ ಸಿಬ್ಬಂದಿವರ್ಗದವರುಗಳು ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ತಿಳಿಸಿರುತ್ತಾರೆ.














