ಹರಕೆ ತಿರೀಸಲು ಹೋದ RCB ಅಭಿಮಾನಿಗಳಿಂದ ಹೊತ್ತಿಕೊಳ್ತು ಬೆಂಕಿ..!

suddionenews
1 Min Read

 

ಬೆಂಗಳೂರು: RCB ಕ್ರೇಜ್ ಎಷ್ಟಿದೆ ಅನ್ನೋದು‌ ಎಲ್ಲರಿಗೂ ಗೊತ್ತು. ಆರ್ಸಿಬಿ ಎಷ್ಟೇ ಮ್ಯಾಚ್ ಗಳನ್ನ ಸೋತರು ಅದರ ಅಭಿಮಾನಿಗಳ ಅಭಿಮಾನ ಮಾತ್ರ ಬದಲಾಗುವುದಿಲ್ಲ. ಪ್ರತಿ ಸಲ ಐಪಿಎಲ್ ಮ್ಯಾಚ್ ಆರಂಭವಾದಾಗಲೂ ಒಂದೇ ಘೋಷಣೆ, ಈ ಸಲ‌ ಕಪ್‌ ನಮ್ದೆ ಅನ್ನೋದು. ಆರ್ಸಿಬಿ ಕಪ್ ಗೆಲ್ಲಲೇಬೇಕೆಂದು ಅಭಿಮಾನಿಗಳು ಮಾಡುವ ಕೆಲಸ ಒಂದೆರಡಲ್ಲ. ಕಂಡ‌ಕಂಡ‌ ದೇವರಿಗೂ ಹರಕೆ ಹೊರುತ್ತಾರೆ.

ಇವತ್ತು ಬೆಂಗಳೂರು ಕರಗದ ಉತ್ಸವ ಇದೆ. ಧರ್ಮರಾಯ ಸ್ವಾಮಿಗೂ ಆರ್ಸಿಬಿ ಅಭಿಮಾನಿಗಳು ಹರಕೆ ಹೊತ್ತಿದ್ದರು. ದೇವಸ್ಥಾನದ ಬಳಿ ಕರ್ಪೂರ ಹಚ್ಚಿದ್ದರು. ಆದರೆ ಇದರಿಂದ ದೊಡ್ಡ ಯಡವಟ್ಟಾಗಿದೆ. ದ್ರೌಪದಿ ದೇವಿಗೆ ನೂರಾರು ಕೆಜಿಯಷ್ಟು ಕರ್ಪೂರ ಹಚ್ಚಿದ್ದಾರೆ.

ಕರ್ಪೂರ ಹಚ್ಚುವ ಮುಂಚೆ ಪೊಲೀಸರು ಕೂಡ ಅನೌನ್ಸ್ ಮಾಡಿದ್ದರು. ಹತ್ತಿರವಿರುವ ಬೈಕ್ ಗಳನ್ನೆಲ್ಲಾ ದೂರ ಇಡಿ ಎಂದು ಹೇಳಿದ್ದರು. ಆದರೆ ತೆರವುಗೊಳಿಸದಂತೆ ಕರ್ಪೂರ ಹಚ್ಚಿದ್ದಾರೆ. ಈ ವೇಳೆ, ಹಲವು ಬೈಕ್ ಗಳಿಗೆ ಬೆಂಕಿ ಬಿದ್ದಿದೆ. ಸುಮಾರು ನೂರು ಮೀಟರ್ ನಷ್ಟು ಕರ್ಪೂರ ಹಚ್ಚಿದ್ದಾರೆ. ಕರ್ಪೂರದ ಬೆಂಕಿ ನಂದಿಸಲು ದೇವಸ್ಥಾನದ ಆಡಳಿತ ಮಂಡಳಿ ಹರಸಾಹಸ ಪಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks