ವಿಜಯಪುರ: ರಾಜ್ಯದೆಲ್ಲೆಡೆ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಯ ಕೊಠಡಿಯೊಳಕ್ಕೆ ಯಾವುದೇ ರೀತಿಯ ಮೊಬೈಲ್ ಬಳಕೆಗೆ ಅವಕಾಶವಿಲ್ಲ. ಆದ್ರೆ ಮೇಲ್ವಿಚಾರಕಿಯೊಬ್ಬರು ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದಲ್ಲದೆ, ಸೆಲ್ಫೀ ಬೇರ ಕ್ಲಿಕ್ಕಿಸಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ದೇವಣಂಗಾವ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಸಿಂದಗಿ ಸಮಾಜ ಕಲ್ಯಾಣ ಇಲಾಖೆಯ ಎಡಿ ಆಗಿರುವ ನಿರ್ಮಲಾ ಅವರನ್ನು ಇಂದು ಪರೀಕ್ಷೆಗೆ ಸ್ಪೆಷಲ್ ಅಬ್ಸರ್ವರ್ ಆಗಿ ನೇಮಕ ಮಾಡಲಾಗಿತ್ತು. ಪರೀಕ್ಷೆ ಆರಂಭವಾದ ಬಳಿಕ ನಿರ್ಮಲಾ ಅವರು ಸೆಲ್ಫೀ ಕ್ಲಿಕಗಕಿಸಿಕೊಂಡಿದ್ದಾರೆ.
ಆ ಫೋಟೋವನ್ನು ಹಲವು ಗ್ರೂಪ್ ಗಳಿಗೂ ಫಾರ್ವಡ್ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಗ್ರೂಪ್ ಗೂ ಫೋಟೋ ಸೆಂಡ್ ಆಗಿದೆ. ಇದನ್ನು ಗಮನಿಸಿರುವ ಇಲಾಖೆ, ನಿರ್ಮಲಾ ಅವರಿಗೆ ನೋಟೀಸ್ ಕೊಡುವುದಕ್ಕೆ ನಿರ್ಧಾರ ಮಾಡಿದೆ.