ಸುಮಲತಾಗೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಯ ಸವಾಲು ನೀಡಿದ ಬಿಜೆಪಿ..!

suddionenews
1 Min Read

 

ಬೆಂಗಳೂರು: ಸುಮಲತಾ ಇತ್ತಿಚೆಗಷ್ಟೇ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಈ ಬಾರಿ ಹಳೇ ಮೈಸೂರು ಭಾಗವೇ ಬಿಜೆಪಿಗೆ ಟಾರ್ಗೆಟ್ ಆಗಿರುವ ಕಾರಣ ಸುಮಲತಾ ಅವರಿಗೆ ಹೊಸ ಜವಬ್ದಾರಿಯನ್ನು ನೀಡಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುವಂತೆ ಹೊಸ ಸವಾಲು ನೀಡಿದೆ.

ಮಂಡ್ಯ, ಹಾಸನ, ಚಾಮರಾಜನಗರ, ಬೆಂಗಳೂರು.ಗ್ರಾಮಾಂತರ ಭಾಗದಲ್ಲಿ ಪಕ್ಷ ಬಲವರ್ಧನೆ ಮಾಡಲು ಸೂಚಿಸಿದೆ.‌ ಹೀಗಾಗಿ ನಾಳೆಯಿಂದ ಸುಮಲತಾ ಖುದ್ದು ಅಖಾಡಕ್ಕೆ ಧುಮುಕಲಿದ್ದಾರೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸೋ ಮೂಲಕ ಪಕ್ಷ ಸಂಘಟನೆ ಮಾಡಲಿದ್ದಾರೆ.

ಇನ್ನು ಸುಮಲತಾ ಸಂಸದೆಯಾಗುವುದಕ್ಕೆ ಹಲವರ ಬೆಂಬಲವಿತ್ತು. ಕಾಂಗ್ರೆಸ್ ಪಕ್ಷದವರು ಕೂಡ ಪರೋಕ್ಷವಾಗಿ ಸಪೋರ್ಟ್ ಮಾಡಿ, ಗೆಲುವಿಗೆ ಕಾರಣವಾಗಿದ್ರು. ಈಗ ಇದ್ದಕ್ಕಿದ್ದ ಹಾಗೇ ಬಿಜೆಪಿ ಸೇರಿರುವುದು, ಅವರನ್ನು ಬೆಂಬಲಿಸಿದವರಿಗೆ ಬೇಸರ ಉಂಟು ಮಾಡಿದೆ. ನೇರವಾಗಿಯೇ ಕೋಪ ಹೊರ ಹಾಕಿದ್ದು, ಆಕ್ರೋಶದ ನುಡಿಗಳನ್ನು ನುಡಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks