ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿ, ರಾಜಸ್ಥಾನದ ಉದಯ್ ನಗರದಲ್ಲಿ ನಡೆದ ಹತ್ಯೆ ವಿಚಾರವಾಗಿ ಮಾತನಾಡಿದ್ದು, ಬೆಂಗಳೂರು ಉತ್ತರ ಜಿಲ್ಲೆಯ 10 ಕ್ಷೇತ್ರದಲ್ಲಿ ಪ್ರತಿಭಟನೆ ಮಾಡುತ್ತೇವೆ. ನಾನು, ಗೋಪಾಲಯ್ಯ, ಅಶ್ವತ್ಥ್ ನಾರಾಯಣ್, ಬೈರತಿ ಬಸವರಾಜ ಸಚಿವರು ಇರ್ತೀವಿ. ಈ ರೀತಿಯ ಘಟನೆ ಮತ್ತೊಮ್ಮೆ ಆಗದೇ ಇರುವ ರೀತಿಯಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು.
ಸಿದ್ದರಾಮಯ್ಯ ಲೇಟ್ ಆಗಿ ಎಚ್ಚೆತ್ತುಕೊಂಡಿದ್ದಾರೆ. ಸಿದ್ದರಾಮಯ್ಯ ಸಡನ್ ಆಗಿ ಪ್ರತಿಕ್ರಿಯೆ ಕೊಡಲ್ಲ. ಬೇರೆ ಕಮಿನ್ಯೂಟಿ ಆದ್ರೆ ಬೇಗ ಮಾತಾನಾಡುತ್ತಾರೆ. ಈ ರೀತಿಯಲ್ಲಿ ವಿಡಿಯೋ ಮಾಡಿ ಹಾಕೋದು ಸರಿಯಲ್ಲ. ಕನ್ಹಯ್ಯ ಲಾಲ್ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ. ಪ್ರತಿಭಟನೆ ಜೊತೆಗೆ ಪರಿಹಾರವನ್ನು ಸೇರಿಸಿ ಕನ್ಹಯ್ಯ ಲಾಲ್ ಕುಟುಂಬಕ್ಕೆ ಕೊಡುತ್ತೇವೆ.
ಎಲ್ಲಾ ಕಡೆ ಪರಿಹಾರ ಕಲೆಕ್ಟ್ ಮಾಡಿ ಕನ್ಹಯ್ಯ ಕುಟುಂಬಕ್ಕೆ ತಲುಪಿಸುವ ಕೆಲಸ ಮಾಡುತ್ತೇವೆ. ಇಡೀ ದೇಶ ಖಂಡಿಸಿದ ಮೇಲೆ ಸಿದ್ದರಾಮಯ್ಯ ಎಚ್ಚೆತ್ತುಕೊಂಡಿದ್ದಾರೆ ಎಂದಿದ್ದಾರೆ.
ರೆಬಲ್ ಶಾಸಕರು ವಾಪಸ್ ಕಾಂಗ್ರೆಸ್ ಹೋಗ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಬಿಜೆಪಿಗೆ ಸೇರಿದ್ದೇನೆ, ಬಿಜೆಪಿಯ ಚಿಹ್ನೆಯಿಂದ ಗೆದ್ದಿದ್ದೇನೆ. ಮುಂದಿನ ದಿನಗಳಲ್ಲಿ ಬಿಜೆಪಿಯಿಂದಲೇ ಚುನಾವಣೆಗೆ ನಿಲ್ಲುತ್ತೇನೆ. ಆರ್.ಎಸ್ ಎಸ್ ತತ್ವ ಸಿದ್ದಾಂತ ನಮಗೂ ಆಗಿ ಬರುತ್ತೆ. ನಮ್ಮ ಕ್ಷೇತ್ರದಲ್ಲೇ ಸಂಘ ಪರಿವಾರದ ಕಾರ್ಯಕ್ರಮ ನಡೆಯುತ್ತೆ. ಹೀಗಾಗಿ ನಾನು ಅವರ ಎಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ.
ಮತ್ತೆ ಕಾಂಗ್ರೆಸ್ ಗೆ ಮರಳುವ ಪ್ರಶ್ನೆಯೇ ಇಲ್ಲ. ಮೈಸೂರು ಉಸ್ತುವಾರಿ ಆಗಿರುವುದರಿಂದ ಏನಾದರೂ ಕೇಳ್ತಾರೆ. ಅಷ್ಟೇ ಅದು ಬಿಟ್ಟು ಬೇರೆ ರಾಜಕೀಯ ವಿಚಾರ ಸಿದ್ದರಾಮಯ್ಯ ಜೊತೆಗೆ ಚರ್ಚೆ ಮಾಡಿಲ್ಲ ಎಂದಿದ್ದಾರೆ.