ಬೆಂಗಳೂರು: ನಿನ್ನೆ ಎಲ್ಲಾ ಸರ್ಕಾರಿ ನೌಕರರು ಒಂದಾಗಿ ಏಳನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿದರು. ಸರ್ಕಾರ ಕೂಡ ಮಣಿದು ಆ ಬೇಡಿಕೆಗೆ ಅಸ್ತು ಎಂದಿದೆ. ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ. ಆದ್ರೆ ಅದ್ಯಾಕೋ ನೌಕರರಲ್ಲಿಯೇ ಬಿರುಕು ಮೂಡಿದೆ ಎಂಬುದು ಗೊತ್ತಾಗುತ್ತಿದೆ.
ನೌಕರ ಸಂಘದ ಅಧ್ಯಕ್ಷ ಷಡಕ್ಷರಿ ನಡೆಯನ್ನು ಸರ್ಕಾರಿ ನೌಕರರ ಸಂಘದ ಇನ್ನೊಂದು ವರ್ಗ ಖಂಡನೆ ಮಾಡಿದೆ. ಇದು ಮಾತಿಗೆ ಮಾತು ಕೂಡ ಜೋರಾಗಿ ಬೆಳೆದಿದೆ. ಷಡಕ್ಷರಿ ಹಾಗೂ ಸಚಿವಾಲಯ ನೌಕರರ ಅಧ್ಯಕ್ಷ ಪಿ ಗುರುಸ್ವಾಮಿ ಮಧ್ಯೆ ವಾಕ್ಸಮರವೇ ನಡೆದಿದೆ ಎನ್ನಲಾಗಿದೆ.
ಮುಷ್ಕರವನ್ನು ವಾಪಾಸ್ ಪಡೆದಿದ್ದಕ್ಕೆ ಷಡಕ್ಷರಿ ವಿರುದ್ಧ ಆರೋಪ ಕೇಳಿ ಬಂದಿದೆ. ಗುರುಸ್ವಾಮಿ ಅವರು ಷಡಕ್ಷರಿ ಮೇಲೆ ಇದೇ ವಿಚಾರಕ್ಕೆ ಕೋಪಗೊಂಡಿದ್ದಾರೆ. ಷಡಕ್ಷರಿ ನಡೆ ಸರಿಯಲ್ಲ. ಹೋರಾಟದಲ್ಲಿ ರಾಜಕೀಯ ಬೆರೆಯಬಾರದು. ಅವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದು ಸರಿಯಲ್ಲ. ಅವರು ಸ್ವಯಂ ಘೋಷಿತ ಅಧ್ಯಕ್ಷರು. ಕೇವಲ ಭಾಷಣಕಾರ ಅಷ್ಟೇ ಕೆಲಸ ಮಾಡಲ್ಲ ಎಂದು ಗರಂ ಆಗಿದ್ದಾರೆ.