ಪಂಜಾಬ್ನ ಖ್ಯಾತ ಗಾಯಕ ಸಿಧು ಮೂಸೆವಾಲ ಹತ್ಯೆಯಾದ ಬಳಿಕ ಸಲ್ಮಾನ್ ಖಾನ್ ಸೇರಿದಂತೆ ಹಲವು ನಟರಿಗೆ ಮಹಾರಾಷ್ಟ್ರ ಸರ್ಕಾರ ಭದ್ರತೆ ಒದಗಿಸಲು ನಿರ್ಧಾರ ಮಾಡಿದೆ. ಇತ್ತಿಚೆಗೆ ಸಲ್ಮಾನ್ ಅವರ ತಂದೆಗೆ ಜೀವ ಬೆದರಿಕೆ ಪತ್ರವೊಂದು ಬಂದಿತ್ತು. ಹೀಗಾಗಿ ಸಲ್ಮಾನ್ ಖಾನ್ ಅವರಿಗೆ Y ಪ್ಲಸ್ ಭದ್ರತೆ ಒದಗಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ ಮಾಡಿದೆ. ಜೊತೆಗೆ ಅಕ್ಷಯ್ ಕುಮಾರ್ ಹಾಗೂ ಅನುಪಮ್ ಖೇರ್ ಅವರಿಗೂ ಭದ್ರತೆ ಒದಗಿಸಲು ನಿರ್ಧರಿಸಿದೆ.
ಸಲ್ಮಾನ್ ಖಾನ್ ಅವರ ತಂದೆಗೆ ಬಂದ ಜೀವ ಬೆದರಿಕೆ ಪತ್ರದಲ್ಲಿ ಸಿಧು ಮೂಸೆವಾಲರನ್ನು ಹತ್ಯೆ ಮಾಡಿದಂತೆ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲಾಗುತ್ತದೆ ಎಂದು ಬರೆಯಲಾಗಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಬೆದರಿಕೆ ಬಂದ ಹಿನ್ನೆಲೆ ಸಲ್ಮಾನ್ ಖಾನ್ ಗೆ Y ಪ್ಲಸ್ ಭದ್ರತೆ ಒದಗಿಸಲಾಗಿದೆ. ಸಲ್ಮಾನ್ ಖಾನ್ ಜೊತೆಗೆ ಅಕ್ಷಯ್ ಕುಮಾರ್, ಅನುಪಮ್ ಖೇರ್ ಗೂ ಜೀವ ಬೆದರಿಕೆ ಇದೆ ಎನ್ನಲಾಗುತ್ತಿದೆ.
ಸಲ್ಮಾನ್ ಖಾನ್ ಅವರಿಗೆ ಈ ಹಿಂದೆ ಅಂದರೆ ಆಗಸ್ಟ್ ನಲ್ಲಿಯೇ ಲೈಸೆನ್ಸ್ ಇರುವ ಗನ್ ನೀಡಲಾಗಿತ್ತು. ಈಗ ಭದ್ರತೆಯನ್ನು ಮತ್ತಷ್ಟು ಹೆಚ್ಚು ಮಾಡಲಾಗಿದೆ. ಅದರಲ್ಲಿ ನಾಲ್ಕು ಶಸ್ತ್ರಸಜ್ಜಿತ ಸಿಬ್ಬಂದಿ ಇರಲಿದ್ದಾರೆ. ಸರ್ಕಾರ ನೀಡಿರುವ ಭದ್ರತೆಯಲ್ಲಿಯೇ ತಮ್ಮ ಸಿನಿಮಾ ಹಾಗೂ ದೈನಂದಿನ ಚಟುವಟಿಕೆ ನಡೆಸುತ್ತಿದ್ದಾರೆ.