ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಏ.23) : ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರು ಗ್ರಾಮದ ಪಶುವೈದ್ಯಾಧಿಕಾರಿ ಡಾ.ತಿಪ್ಪೆಸ್ವಾಮಿ ಅವರನ್ನು ಲಂಚ ಬೇಡಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಕಾಗಳಗೆರೆ ಗ್ರಾಮದ ಎಸ್.ಸ್ವಾಮಿ ಅವರ ಸಿಂಧಿ ಹಸು ಅನಾರೋಗ್ಯ ಕಾರಣ ಮರಣ ಹೊಂದಿತ್ತು. ಮೃತಪಟ್ಟ ಹಸುವಿನ ಮರಣೋತ್ತರ ಪರೀಕ್ಷೆ ವರದಿ ನೀಡಲು ಪಶುವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ರೂ.7000 ಕ್ಕೆ ಲಂಚಕ್ಕೇ ಬೇಡಿಕೆ ಇಟ್ಟಿದ್ದರು.
ಮುಂಗಡವಾಗಿ ರೂ.1000 ಗಳನ್ನು ಸಹ ಪಡೆದುಕೊಂಡಿದ್ದರು. ಲಂಚ ನೀಡಲು ಇಷ್ಟವಿರದ ಎಸ್.ಸ್ವಾಮಿ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು. ಆಪಾದಿತ ಡಾ.ತಿಪ್ಪೇಸ್ವಾಮಿ ಮಂಗಳವಾರ ರೂ.6000 ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಂದ ಬಂಧಿತನಾಗಿದ್ದಾನೆ.
ಕಾಯಾಚರಣೆಯನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ ಅವರ ನೇತೃತ್ವದಲ್ಲಿ, ಪೊಲೀಸ್ ನಿರೀಕ್ಷಕಿ ಬಿ.ಕೆ.ಲತಾ ಅವರ ತಂಡ ಕೈಗೊಂಡಿದೆ.
ಈ ಸಂದರ್ಭದಲ್ಲಿ ಪೊಲೀಸ್ ಉಪಾಧೀಕ್ಷಕ ಎನ್.ಮೃತ್ಯುಂಜಯ, ವೈ.ಎಸ್.ಶಿಲ್ಪಾ, ಆರ್.ವಸಂತ ಕುಮಾರ್, ಪೊಲೀಸ್ ಸಿಬ್ಬಂದಿ ಜಿ.ಎಂ.ತಿಪ್ಪೇಸ್ವಾಮಿ, ಹೆಚ್.ಶ್ರೀನಿವಾಸ, ಎಸ್.ಆರ್.ಪುಷ್ಪ, ಎಲ್.ಜಿ.ಸತೀಶ, ಜಿ.ಎನ್.ಸಂತೋಷ ಕುಮಾರ್, ಎಂ.ವೀರೇಶ್, ಆರ್.ವೆಂಕಟೇಶ್‌ಕುಮಾರ್, ಟಿ.ವಿ.ಸಂತೋಷ, ಡಿ.ಮಾರುತಿ, ಎನ್.ಎಲ್.ಶ್ರೀಪತಿ ಸೇರಿದಂತೆ ಮತ್ತಿತರರು ಇದ್ದರು.