ರಾಜ್ಯೋತ್ಸವ ಕನ್ನಡಿಗರ ಸ್ವಾಭಿಮಾನದ ಹೋರಾಟ ಸಾರ್ಥಕವಾದ ದಿನ : ಟಿ.ಪಿ.ಉಮೇಶ್

1 Min Read

ಹೊಳಲ್ಕೆರೆ : ನವೆಂಬರ್ ೧, ೧೯೫೬ ರಂದು ಬಹುತೇಕ ಕನ್ನಡ ಭಾಷಿಕರಿರುವ ನಾಡೆಲ್ಲ ಕರ್ನಾಟಕವಾಯಿತು. ಕನ್ನಡಿಗರ ಸ್ವಾಭಿಮಾನದ ಹೋರಾಟ ಸಾರ್ಥಕವಾಯಿತು. ಕನ್ನಡ ನಾಡು ನುಡಿ ನೆಲ ಜಲ ಕನ್ನಡಮಯವಾದ ಈ ಸುದಿನ ಕನ್ನಡಿಗರಿಗೆಲ್ಲ ಗೌರವ ಹಾಗು ಹೆಮ್ಮೆಯ ದಿನ ಎಂದು ಸಹಶಿಕ್ಷಕರಾದ ಟಿ.ಪಿ.ಉಮೇಶ್ ಹೇಳಿದರು.

ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ದೇಶದ ಸ್ವಾತಂತ್ರ್ಯ ಹೋರಾಟದ ಜೊತೆಯಲ್ಲೆ ಭಾಷಾವಾರು ಪ್ರಾಂತಗಳ ರಚನೆಗೆ ಒತ್ತಾಯಗಳು ನಡೆಯುತ್ತಿದ್ದವು. ಕನ್ನಡ ಭಾಷಿಕರ ನಾಡು ತಮಿಳು, ತೆಲುಗು, ಮಲಯಾಳಿ, ಮರಾಠಿ ಭಾಷಿಕ ಪ್ರಾಂತಗಳಲ್ಲಿ ಹಂಚಿ ಹೋಗಿತ್ತು. ಆಡಳಿತ, ಶಿಕ್ಷಣ ಹಾಗು ಸಂಸ್ಕೃತಿ ಪರಂಪರೆಯ ದೃಷ್ಟಿಯಿಂದ ಕನ್ನಡ ಭಾಷಿಕರ ನಾಡು ಒಗ್ಗೂಡಬೇಕಾದದ್ದು ಅನಿವಾರ್ಯವಾಗಿತ್ತು. ಡೆಪ್ಯುಟಿ ಚೆನ್ನಬಸಪ್ಪ, ಆಲೂರು ವೆಂಕಟರಾವ್, ಎಸ್.ನಿಜಲಿಂಗಪ್ಪ, ಮುದವೀಡು ಕೃಷ್ಣರಾಯರು, ಅನಕೃ, ತರಾಸು, ಪಾಟೀಲ ಪುಟ್ಟಪ್ಪ, ವಿಕೃಗೋಕಾಕ್, ಕುವೆಂಪು ಮುಂತಾದ ಸಾವಿರಾರು ಮಹನೀಯರ ಶ್ರಮದಿಂದ ಕರ್ನಾಟಕ ಒಂದುಗೂಡಿತು. ಆರಂಭದಿ ವಿಶಾಲ ಮೃಸೂರು ರಾಜ್ಯ ಎಂದು ನಾಮಕರಣಗೊಂಡರು ನಂತರ ಕರ್ನಾಟಕ ಎಂದೇ ಹೆಸರಾಯಿತು. ಕನ್ನಡಿಗರ ರಾಜ್ಯ ರಚನೆಯಾಗಿ ಆರವತ್ತೆಂಟು ವರ್ಷಗಳು ಮತ್ತು ಕರ್ನಾಟಕ ಎಂದು ಹೆಸರಾಗಿ ಐವತ್ತು ವರ್ಷಗಳಾಯಿತು ಎಂದು ತಿಳಿಸಿದರು.

ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು ಮತ್ತು. ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಮುಖ್ಯೋಪಾಧ್ಯಾಯರಾದ ಡಿ.ಸಿದ್ದಪ್ಪ, ಸಹಶಿಕ್ಷಕರಾದ ರೇಷ್ಮಾ, ಅಂಗನವಾಡಿ ಶಿಕ್ಷಕಿ ಜ್ಯೋತಿ, ಅಡಿಗೆ ಸಹಾಯಕರಾದ ತಿಮ್ಮಮ್ಮ, ಶಾರದಮ್ಮ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *