Donate blood, save a precious life: Dr. Ravikumar
ಚಿತ್ರದುರ್ಗ,(ಜುಲೈ 06) : ಕೋವಿಡ್ ಸಂದಿಗ್ಧ ಸಂದರ್ಭದಲ್ಲೂ ರಕ್ತದಾನ ಶಿಬಿರವನ್ನು ಆಯೋಜಿಸುವುದರ ಮೂಲಕ ಅಮೂಲ್ಯ ಜೀವಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಾಗಿದೆ. ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಬಹಳ ಅವಶ್ಯಕವಾಗಿದೆ ಎಂದು ಐಎಂಎ ಕಾರ್ಯದರ್ಶಿ ಡಾ. ರವಿಕುಮಾರ್ ತಿಳಿಸಿದರು.
ನಗರದ ಬಿ.ಸಿ.ರಾಯ್ ಸಭಾಂಗಣದಲ್ಲಿ ನೆಹರು ಯುವಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಜಿಲ್ಲಾ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿಯವರ 121 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ಯಾಮ್ ಪ್ರಸಾದ್ ಮುಖರ್ಜಿಯವರ 121 ನೇ ಜನ್ಮ ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಸಂಗತಿಯಾಗಿದೆ. ರಕ್ತದಾನ ಶ್ರೇಷ್ಠ ದಾನ. ಒಬ್ಬರು ರಕ್ತದಾನ ಮಾಡುವುದರ ಮೂಲಕ ಮೂರು ನಾಲ್ಕು ರೋಗಿಗಳನ್ನು ಉಳಿಸಬಹುದು. ರಕ್ತದಾನ ಮಾಡುವ ದಾನಿಗಳಿಗೆ ನೆಮ್ಮದಿ, ತೃಪ್ತಿ ಸಿಗುತ್ತದೆ. ಪ್ರತಿ ಪುರುಷ 3 ತಿಂಗಳೊಮ್ಮೆ ಮತ್ತು ಮಹಿಳೆಯರು 4 ತಿಂಗಳೊಮ್ಮೆ ರಕ್ತದಾನ ಮಾಡಬಹುದು ಎಂದು ತಿಳಿಸಿದರು.
ಹೊಳಲ್ಕೆರೆ ಎ.ಪಿ.ಎಂ.ಸಿ. ಹಿರಿಯ ಮಾರುಕಟ್ಟೆ ಮೇಲ್ವಿಚಾರಕರು ಎ.ಜಿ.ಸುರೇಂದ್ರಬಾಬು ಮಾತನಾಡಿ, ಸ್ವಾತಂತ್ರ್ಯ ಭಾರತದ ಲೋಹಪುರುಷ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರು ಅಸಾಧಾರಣ ಸಂಸದೀಯ ಪಟು, ಭಾರತೀಯ ರಾಜಕೀಯ ಕ್ಷೇತ್ರಕ್ಕೆ ಅವರ ಕೊಡುಗೆ ಆಪಾರ. ರಾಷ್ಟ್ರೀಯ ಸರ್ಕಾರದಲ್ಲಿ ಪ್ರಥಮ ಕೈಗಾರಿಕಾ ಮತ್ತು ವಾಣಿಜ್ಯ ಮಂತ್ರಿಗಳಾಗಿದ್ದರು. ಭಾರತದ ಕೈಗಾರಿಕಾ ಕೈಗಾರಿಕಾ ನೀತಿಗೆ ಹಾಗೂ ಸುಧಾರಣೆಗೆ ಕಾರಣರಾದರು ಎಂದರು.
ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಶ್ಯಾಮ್ ಪ್ರಸಾದ್ ಮುಖರ್ಜಿಯವರು 121ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಸುಹಾಸ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಮಜಹರ್ ಉಲ್ಲಾ, ಜಿಲ್ಲಾ ಎನ್‍ಎಸ್‍ಎಸ್ ನೋಡಲ್ ಅಧಿಕಾರಿ ಕೆ. ಲೋಕೇಶ್ ನಾಯಕ್, ಹೊಳಲ್ಕೆರೆ ಎ.ಪಿ.ಎಂ.ಸಿ ಕಾರ್ಯದರ್ಶಿ ಜಿ.ಎಸ್.ಸುರೇಶ್, ಸರ್ಕಾರಿ ರಕ್ತ ನಿಧಿ ವೈಧ್ಯಾಧಿಕಾರಿ ಡಾ. ರೂಪ, ಮಹಾರಾಜ ಮದಕರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಹೆಚ್ ಕುಮಾರ, ಅಮೃತ್ ಸ್ಕೂಲ್ ಆಫ್ ನರ್ಸಿಂಗ್ ಪ್ರಾಂಶುಪಾಲರಾದ ವಜಹತ್ ಉಲ್ಲಾ, ಎನ್‍ಎಸ್‍ಎಸ್, ರೆಡ್‍ಕ್ರಾಸ್ ಸ್ವಯಂ ಸೇವಕರು ಹಾಗೂ ಆಸ್ಪತ್ರೆ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.