ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು : ಅರ್ಚಕರ ಒತ್ತಾಸೆ

 

ಚೆನ್ನೈ: 2024ರ ಲೋಕಸಭಾ ಚುನಾವಣೆ ಮುಗಿದ ಬಳಿಕವೂ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಅರ್ಚಕ ಶ್ರೀ ಹರಿಹರ ದೀಶಿಕ ಸ್ವಾಮೀಜಿ ಒತ್ತಾಸೆ ಪಟ್ಟಿದ್ದಾರೆ.

ಮೇ 28ರಂದು ಸಂಸತ್ ಭವನದ ಉದ್ಘಾಟನಾ ಸಮಾರಂಭವಿದೆ. ಈ ಸಮಾರಂಭವನ್ನು ಪ್ರಧಾನಿ ಮೋದಿಯವರೇ ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ ಸೆಂಗೋಲ್ ರಾಜದಂಡವನ್ನು ಪ್ರಧಾನಿ ಮೋದಿಯವರಿಗೆ ನೀಡಲಾಗುತ್ತದೆ. ಈ ಬಗ್ಗೆ ಮಾತನಾಡುವಾಗ ಅರ್ಚಕರು, ತಮ್ಮ‌ಮನದಾಳದ ಆಸೆಯನ್ನು ತಿಳಿಸಿದ್ಸಾರೆ.

ಪ್ರಧಾನಿ ಮೋದಿ ಜಾಗತಿಕ ಮೆಚ್ಚುಗೆಯನ್ನು ಪಡೆದ ನಾಯಕ. ಅವರು ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. 2014ರಲ್ಲಿ ಅವರು ಮತ್ತೆ ಪ್ರಧಾನಿಯಾಗಬೇಕು, ಜನರಿಗೆ ಮಾರ್ಗದರ್ಶನ ನೀಡಬೇಕು. ವಿಶ್ವ ನಾಯಕರು ಪ್ರಧಾನಿ ಮೋದಿಯವರನ್ನು ಪ್ರಶಂಸಿಸುತ್ತಿರುವುದು ನಮಗೆಲ್ಲಾ ಹೆಮ್ಮೆ ತಂದಿದೆ ಎಂದಿದ್ದಾರೆ.

ಇನ್ನು ಪ್ರಧಾನಿ ಮೋದಿಯವರಿಗೆ ನೀಡುತ್ತಿರುವ ಸೆಂಗೋಲ್ ಬಗ್ಗೆ ಮಾತನಾಡಿದ, ವುಮ್ಮಿಡಿ ಬಂಗಾರು ಜ್ಯುವೆಲ್ಲರ್ಸ್‌ನ ಅಧ್ಯಕ್ಷ ವುಮ್ಮಿಡಿ ಸುಧಾಕರ್, “ನಾವು ‘ಸೆಂಗೊಲ್’ ತಯಾರಕರು, ಇದನ್ನು ತಯಾರಿಸಲು ನಮಗೆ ಒಂದು ತಿಂಗಳು ಸಮಯ ತೆಗೆದುಕೊಂಡಿತು, ಇದನ್ನು ಬೆಳ್ಳಿ ಮತ್ತು ಚಿನ್ನದ ಲೇಪನದಿಂದ ಮಾಡಲಾಗಿದೆ. ನಾನು ಆ ಸಮಯದಲ್ಲಿ 14 ವರ್ಷದವನಾಗಿದ್ದೆ. ನಾವು ಪ್ರಧಾನಿ ಮೋದಿಯವರಿಗೆ ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *