ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗಾಗ ಬಿಜೆಪಿ ವಿರುದ್ಧವೇ ಹರಿಹಾಯುತ್ತಾ ಇರುತ್ತಾರೆ. ಪಕ್ಷಕ್ಕೆ ಮುಜುಗರವಾಗುವಂತ ಹೇಳಿಕೆಯನ್ನು ನೀಡುತ್ತಾ ಇರುತ್ತಾರೆ. ಇದೀಗ ಇಂದು ಅಂಥದ್ದೇ ಹೇಳಿಕೆ ನೀಡಿದ್ದಾರೆ. ಬಿಜೆಪಿ ಹೈಕಮಾಂಡ್ ನಿಂದಾನೇ ಈ ಬಾರಿ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಲಾಗಿದೆ. ಅವರನ್ನು ಒಲೈಕೆ ಮಾಡಿ, ಮುಸ್ಲಿಂ ಸಮುದಾಯದ ವೋಟುಗಳನ್ನು ಪಡೆಯಲು ಸೂಚನೆ ನೀಡಿದೆ. ಆದ್ರೆ ಈ ಮಧ್ಯೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೇರೆ ರೀತಿಯದ್ದೇ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ತಪ್ಪಿಯೂ ಸಾಬರಿಗೆ ವೋಟ್ ಹಾಕಬೇಡಿ. ಇನ್ಮೇಲೆ ಟಿಪ್ಪು ಸುಲ್ತಾನ್ ಗೆಲ್ಲುವುದಿಲ್ಲ. ಏನಿದ್ದರೂ ಶಿವಾಜಿ ಭಗವಾಧ್ವಜವೇ ಗೆಲ್ಲುವುದು. ನಾನು ಬೆಳಗಾವಿ ಅಧಿವೇಶನದಲ್ಲಿ ಹೇಳಿದ್ದೆ. ಶಿವಾಜಿ ಹುಟ್ಟದೇ ಇದ್ದಿದ್ರೆ ಸದನದಲ್ಲಿ ಕೂತ 224 ಜನ ಯಾರೂ ಹಿಂದೂಗಳಾಗಿ ಇರುತ್ತಾ ಇರಲಿಲ್ಲ. ಗಡ್ಡಬಿಟ್ಟುಕೊಂಡು ಪಾಕಿಸ್ತಾನ ಸದನದಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.

ಶಾಸಕ ಯತ್ನಾಳ್ ಈ ಹಿಂದೆ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿದ್ದರು. ನಮ್ಮ ಸರ್ಕಾರ ಮರಾಠ ಸಮುದಾಯಕ್ಕಾಗಿ ಅಭಿವೃದ್ಧಿ ಪ್ರಾಧಿಕಾರ ಮಾಡಿದೆ. ಆದರೆ ಇಲ್ಲಿ ಕೆಲವರು ಟಿಪ್ಪು ಸುಲ್ತಾನ್ ಗೆ ಹುಟ್ಟಿದವರು ವಿರೋಧ ಮಾಡುತ್ತಿದ್ದಾರೆ ಎಂದು ಟಿಪ್ಪು ಅಭಿಮಾನಿಗಳ ವಿರುದ್ಸದ ಆಕ್ರೋಶ ಹೊರ ಹಾಕಿದ್ದಾರೆ.

