ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಾ ಇದೆ. ಹೀಗಾಗಿ ಅಲ್ಲಿನ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇತ್ತಿಚೆಗಷ್ಟೇ ಬೆಟ್ಟದಲ್ಲಿ ಮಾದಪ್ಪನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಆ ಪ್ರತಿಮೆ ಮುಂಭಾಗ ದೊಡ್ಡ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದ್ರೆ ಈಗ ಆ ತಡೆಗೋಡೆಯನ್ನು ಯಾರೋ ಉರುಳಿಸಿದ್ದಾರೆ.
ಮಾರ್ಚ್ 18ಕ್ಕೆ ಪ್ರತಿಮೆ ಉದ್ಘಾಟನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಲಿದ್ದಾರೆ. ಮಾದಪ್ಪನ ಪ್ರತಿಮೆ ಸುಮಾರು 108 ಅಡಿ ನಿರ್ಮಾಣ ಮಾಡಲಾಗಿದೆ. ಅದರ ಎದುರುಗಡೆ ಇದ್ದ ತಡೆಗೋಡೆಯನ್ನು ಕಿಡಿಗೇಡಿಗಳು ಕೆಡವಿದ್ದಾರೆ. ಮಾದಪ್ಪನ ಎದುರಿಗೆ ಅಂದವಾಗಿ ಕಾಣುತ್ತಾ ಇತ್ತು. ಕೆಳಗೆ ದೊಡ್ಡ ಜಾಗವಿದೆ. ಆದ್ರೆ ಈಗ ತಡೆಗೋಡೆಯನ್ನೇ ಕಿಡಿಗೇಡಿಗಳು ಕೆಡವಿದ್ದಾರೆ.
ಯಾರಿಗೂ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ ಎಂದು ದೊಡ್ಡ ಕಲ್ಲು ಬಂಡೆಗಳು ಕೆಳಗೆ ಉರುಳಿ ಬಿದ್ದಿದೆ. ಕಿಡಿಗೇಡಿಗಳ ಕೃತ್ಯ ಇದಾಗಿದೆ ಎಂದು ಪ್ರಾಧಿಕಾರದ ಅಧಿಕಾರಗಳು ತಿಳಿಸಿದ್ದಾರೆ. ಇನ್ನು ಸಿಎಂ ಉದ್ಘಾಟನೆಗೆ ಬರವಷ್ಟರಲ್ಲಿ ಮತ್ತೆ ಈ ತಡೆಗೋಡೆಯನ್ನು ಸರಿ ಮಾಡಲಿದ್ದಾರೆ.