ಬಾಗಲಕೋಟೆ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲಾ ಜಿಲ್ಲೆಯಲ್ಲೂ ಸಾಕಷ್ಟು ಸಮಸ್ಯೆ ತಲೆದೂರಿದೆ. ಎಷ್ಟೋ ವರ್ಷಗಳಿಂದ ತುಂಬದ ಕೆರೆಕೋಡಿಗಳು ಇಂದು ತುಂಬಿ ತುಳುಕುತ್ತಿವೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಂತು ಪ್ರವಾಹದ ಸ್ಥಿತಿ ಎದುರಾಗಿದೆ. ಎಷ್ಟೋ ಕಡೆ ಪ್ರವಾಹದ ನೀರಿಗೆ ವಾಹನಗಳು, ಜನ ಜಾನುವಾರುಗಳು ಸಿಕ್ಕಿ ಬಿದ್ದಿದ್ದಾರೆ. ಇದೀಗ ಇತ್ತಿಚೆಗೆ ನದಿನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.
18 ವರ್ಷದ ದೇವಾನಂದ ಶವವಾಗಿ ಸಿಕ್ಕಿದ ಯುವಕ. ಮಲಪ್ರಭಾ ನದಿಯಲ್ಲಿ ಈ ಯುವಕ ಕೊಚ್ಚಿಹೋಗಿದ್ದ. ಯುವಕನ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿಯೆಲ್ಲರು ಸೇರಿ ಶೋಧಕಾರ್ಯ ನಡೆಸುತ್ತಿದ್ದರು. ಆದರೆ ಸುಮಾರು 48 ಗಂಟೆಗಳ ಕಾಲ ಯುವಕನ ಶವ ಪತ್ತೆಯಾಗಿದೆ.
ಬಾಗಲಕೋಟೆ ಜಿಲ್ಲೆಯ ಹಿರೆಮಳಗಾವಿ ಎಂಬಲ್ಲಿ ಯುವಕನ ಶವ ಸಿಕ್ಕಿದೆ. ಕಾಲುಜಾರಿ ನದಿಯಲ್ಲಿ ಬಿದ್ದಿದ್ದ ಯುವಕ ಮಲಪ್ರಭಾ ಹಿನ್ನಿರಿನ ಕಬ್ಬಿನ ಗದ್ದೆಯಿಂದ ಇಳಕಲ್ ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಹೊರ ತೆಗೆದಿದ್ದಾರೆ.