ಮದ್ಯದ ನಶೆ ಇದ್ರೆ ಪೊಲೀಸರಿಗೂ ಡೋಂಟ್ ಕೇರ್.. ಮತದಾರನೊಬ್ಬನ ಅವಾಂತರ ನೋಡಿ..!

suddionenews
1 Min Read

 

 

ಗದಗ: ಕುಡಿದ ಮೇಲೆ ಅದೆಷ್ಟೋ ಜನ ಹೊಸ ಅವತಾರಗಳನ್ನ ತೋರಿಸುವುದನ್ನು ಎಲ್ಲರೂ ಒಂದಲ್ಲ ಒಂದು ರೀತಿ ನೋಡಿಯೇ ಇರ್ತಾರೆ. ಸೋಷಿಯಲ್‌ ಮೀಡಿಯಾಗಳಲ್ಲೂ ಅಂತ ವಿಡಿಯೋ ಗಳನ್ನ ನೋಡಿ ಮನತುಂಬಿ ನಕ್ಕಿರುವವರು ಇದ್ದಾರೆ. ಇಲ್ಲೊಬ್ಬ ಕುಡುಕ ಪೊಲೀಸರಿಗೆ ಅವಾಜ್ ಹಾಕಿರೋ ಘಟನೆ ನಡೆದಿದೆ.

ನಗರದ ಡಾ.ಬಿ ಆರ್ ಅಂಬೇಡ್ಕರ್ ನಗರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದೆ. ಈ ವೇಳೆ ಮತಗಟ್ಟೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಈ ವೇಳೆ ಮತದಾರನೊಬ್ಬ ಅಲ್ಲಿಗೆ ಬಂದು ಅವಾಂತರ ಸೃಷ್ಟಿಸಿದ್ದಾನೆ.

ಕುಡಿದ ಮತದಾರನೊಬ್ಬ ನಾನು ಎಲ್ಲಿ ಬೇಕಾದರೂ ಕುಳಿತು ಕೊಳ್ತೀನಿ. ನೀವ್ಯಾಕೆ ಕೇಳ್ತೀರಾ..? ಇದು ನಮ್ಮ ಏರಿಯಾ ಮುಟ್ಟಬೇಡಿ ಎಂದು ರಂಪಾಟ ಮಾಡಿದ್ದಾನೆ. ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ 66ರ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಆ ಕುಡುಕನನ್ನ ಮನವೊಲಿಸಲು ಪ್ರಯತ್ನಿಸಿದರು ಸಾಧ್ಯವಾಗಿಲ್ಲ. ಕಡೆಗೆ ಅವರ ಮನೆಯವರಿಗೆ ವಿಷಯ ಮುಟ್ಟಿಸಿ ಆತನನ್ನ ಕರೆದುಕೊಂಡು ಹೋಗುವಂತೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *