ರಾಯಚೂರು: ಮೇ 10ರಂದು ಚುನಾವಣೆ ನಡೆದಿದೆ. ಈಗ ರಾಜ್ಯದಲ್ಲಿ ಹೊಸ ಸರ್ಕಾರ ಕೂಡ ರಚನೆಯಾಗಿದೆ. ಒಂದೊಂದು ಮತವೂ ತುಂಬಾ ಅಮೂಲ್ಯ ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿಯೇ ಯಾರೂ ವೋಟ್ ಮಿಸ್ ಮಾಡಬೇಡಿ ಎಂದೇ ಜಾಗೃತಿಯನ್ನು ನೀಡುತ್ತಾರೆ. ಎಲ್ಲೆಲ್ಲೋ ಇರುವ ಮತದಾರರನ್ನು ಕರೆಸುವ ಕೆಲಸವಾಗುತ್ತದೆ. ಅಂದಿನ ಒಂದು ದಿನಕ್ಕೆ. ಅದರಲ್ಲೂ ಫಸ್ಟ್ ವೋಟರ್ಸ್ ಗಂತು ಇನ್ನಷ್ಟು ಎಕ್ಸೈಟ್ಮೆಂಟ್ ಇರುತ್ತೆ. ನಾನು ವೋಟ್ ಮಾಡಲೇಬೇಕೆಂದು ಫಸ್ಟ್ ವೋಟರ್ ಆಗಿದ್ದಂತ ಸನಾ ಹಟ್ಟಿ ಎಂಬ ನರ್ಸಿಂಗ್ ವಿದ್ಯಾರ್ಥಿನಿ ಇವತ್ತು ಆಸ್ಪತ್ರೆಯ ಬೆಡ್ ಮೇಲೆ ದಿನದೂಡುವಂತೆ ಆಗಿದೆ.
ಸನಾ ಹಟ್ಟಿ ಮೂಲತಃ ರಾಯಚೂರಿನವರು. ಆದರೆ ನರ್ಸಿಂಗ್ ಮಾಡುವುದಕ್ಕೆಂದು ಧಾರವಾಡಕ್ಕೆ ಬಂದಿದ್ದರು. ಅಂದು ಮೇ 10ರಂದು ಮತದಾನ ಇದ್ದಿದ್ದರಿಂದ ವೋಟ್ ಹಾಕಲೇಬೇಕೆಂದು ತಮ್ಮೂರಿಗೆ ಹೊರಟಿದ್ದರು. ಆದರೆ ನೇರವಾಗಿ ಬಸ್ ಸಿಗದ ಕಾರಣ ಸಂಬಂಧಿಕರೊಬ್ಬರ ಗಾಡಿಯನ್ನೇ ಹತ್ತಿದ್ದಾರೆ. ವೋಟ್ ಮಾಡಿ ವಾಪಸ್ ಧಾರವಾಡಕ್ಕೆ ಹೋಗುವಾಗ ಬೈಕ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದೆ. ಆ ಅಪಘಾತದಲ್ಲಿ ಸನಾ ಹಟ್ಟಿ ಹೊಟ್ಟೆಯ ಮೇಲೆಯೇ ಕಾರು ಹರಿದಿದೆ.
ಹೊಟ್ಟೆ ಭಾಗದಲ್ಲಿ ಸಾಕಷ್ಟು ಸಮಸ್ಯೆಯಾಗಿದೆ. ಅಪ್ಪ ಅಮ್ಮ ಮಧ್ಯಮ ವರ್ಗದವರು. ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಮಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇಷ್ಟು ದಿನ ಸಾಕಷ್ಟು ಸಾಲ ಮಾಡಿದ್ದಾರೆ. ಇನ್ನಷ್ಟು ಹಣದ ಸಹಾಯ ಬೇಕಾಗಿದೆ. ವೋಟ್ ಗೋಸ್ಕರ ಮಗಳು ಈ ಸ್ಥಿತಿ ತಲುಪಿದ್ದಾಳೆ. ಮಸ್ಕಿ ಶಾಸಕರಿಗೆ ವಿಷಯ ಗೊತ್ತಿದ್ದರು ಸಹಾಯಕ್ಕೆ ಧಾವಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.