ಮಂಗಳೂರು ಕುಕ್ಕರ್ ಸ್ಪೋಟ ಪ್ರಕರಣ : ಆಧಾರ್ ಕಾರ್ಡ್ ಅಸಲಿ ವ್ಯಕ್ತಿ ತುಮಕೂರಿನಲ್ಲಿ ಪತ್ತೆ..!
ತುಮಕೂರು: ಮಂಗಳೂರಿನಲ್ಲಿ ಕುಕ್ಕರ್ ಸ್ಪೋಟಗೊಂಡ ಪ್ರಕರಣಕ್ಕೆ ವ್ಯಕ್ತಿಯ ಆಧಾರ್ ಕಾರ್ಡ್ ಸಿಕ್ಕಿದೆ. ಆದ್ರೆ ಆ ಆಧಾರ್ ಕಾರ್ಡ್ ನಕಲಿ ಎಂಬುದು ಗೊತ್ತಾಗಿದೆ. ಹೆಸರು ಬೇರೆ ಫೋಟೋ ಬೇರೆಯಾಗಿದೆ. ಇದೀಗ ಆ ಆಧಾರ್ ಕಾರ್ಡ್ ನಲ್ಲಿರುವ ಹೆಸರಿನ ವ್ಯಕ್ತಿ ತುಮಕೂರಿನಲ್ಲಿ ಸಿಕ್ಕಿದ್ದಾರೆ.
ಪ್ರೇಮ್ ರಾಜ್ ಎಂಬಾತ, ಸ್ಪೋಟದ ಬಳಿ ಸಿಕ್ಕ ಆಧಾರ್ ಕಾರ್ಡ್ ನ ನಿಜವಾದ ಮಾಲೀಕನಾಗಿದ್ದಾನೆ. ಈ ಬಗ್ಗೆ ಮಾತನಾಡಿರುವ ಹುಬ್ಬಳ್ಳಿ ಮೂಲದ ಪ್ರೇಮ್ ರಾಜ್, ನಾನು ತುಮಕೂರು ರೈಲ್ವೇ ಸ್ಟೇಷನ್ ಬಳಿ ಮೆಂಟೈನರ್ ಆಗಿ ಕೆಲಸ ಮಾಡುತ್ತಿದ್ದೇನೆ. ಹಿರೇಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದೇನೆ. ನನ್ನ ಆಧಾರ್ ಕಾರ್ಡ್ ಎರಡು ಬಾರಿ ಕಳೆದು ಹೋಗಿದೆ. ಒಮ್ಮೆ ಕಳೆದುಹೋದಾಗ ಡೂಪ್ಲಿಕೇಟ್ ತೆಗೆದುಕೊಂಡಿದ್ದೆ. ಈಗ ಆರು ತಿಂಗಳ ಹಿಂದೆ ಮತ್ತೊಮ್ಮೆ ಕಳೆದು ಹೋಗಿದೆ. ಹುಬ್ಬಳ್ಳಿಯಿಂದ ಬರುವಾಗ ಕಳೆದು ಹೋಗಿದೆ.
ಈ ಘಟನೆ ನಡೆದ ಬಳಿಕ ಶನಿವಾರ ರಾತ್ರಿಯೇ ಎಡಿಜಿಪಿ ಅಲೋಕ್ ಕುಮಾರ್ ಅವರು ಕರೆ ಮಾಡಿ, ತುಮಕೂರಿನ ಎಸ್ಪಿಯನ್ನು ಸಂಪರ್ಕಿಸುವಂತೆ ತಿಳಿಸಿದ್ದರು. ಅದರಂತೆ ನಾನು ಭೇಟಿಯಾಗಿ ಬಂದಿದ್ದೇನೆ. ನನಗೂ ಮಂಗಳೂರಿನಲ್ಲಿ ನಡೆದ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.