ಭುವನೇಶ್ವರ : ಗ್ರಾಮಗಳ ಅಭಿವೃದ್ಧಿ ಗ್ರಾಮ ಪಂಚಾಯತಿಗಳ ಜವಬ್ದಾರಿ. ಆದ್ರೆ ಗ್ರಾಮ ಪಂಚಾಯ್ತಿಯಿಂದ ಅನುದಾನ ಬಂದರು ಸರಿಯಾಗಿ ನಿರ್ವಹಣೆ ಮಾಡಲ್ಲ. ಆದ್ರೆ ಇದನ್ನ ಎಲ್ಲಾ ಗ್ರಾಮಸ್ಥರು ಧೈರ್ಯವಾಗಿ ವಿರೋಧ ಮಾಡಲ್ಲ. ಮಾಡಿದ್ದಷ್ಟು ಮಾಡಲಿ ಬಿಡು ಅಂತ ಸುಮ್ನೆ ಆಗ್ತಾರೆ. ಆದ್ರೆ ಅಲ್ಲೊಂದು ಗ್ರಾಮವಿದೆ. ಆ ಗ್ರಾಮದಲ್ಲಿ ಸಮಸ್ಯೆ ಬಗೆಹರಿಸದೇ ಇದ್ದರೆ ಮತದಾನವನ್ನೇ ಮಾಡಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಒಡಿಶಾದಲ್ಲಿ ಮುಂದಿನ ತಿಂಗಳು ಗ್ರಾಮ ಪಂಚಾಯತಿ ಚುನಾವಣೆ ಬರ್ತಾ ಇದೆ. ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ. ಕರಾವಳಿಯ ಭದ್ರಕ್ ಜಿಲ್ಲೆಯ ಒಂದು ಹಳ್ಳಿಯ ಮತದಾರರು ಗ್ರಾಮ ಪಂಚಾಯ್ತಿ ಚುನಾವಣೆ ನಿಷೇಧಿಸಲು ನಿರ್ಧರಿಸಿದ್ದಾರೆ.
ಗ್ರಾಮದಲ್ಲಿ ಕಾಟ ಕೊಡ್ತಿರುವ ಮಂಗಗಳನ್ನ ಓಡಿಸದೇ ಇದ್ದಲ್ಲಿ ಚುನಾವಣೆಗೆ ಮತದಾನ ಮಾಡಲ್ಲ ಎಂದಿದ್ದಾರೆ. ಗೋಪಗಡದಪುರ ಗ್ರಾಮದಲ್ಲಿ ಕಳೆದ ಎರಡು ತಿಂಗಳಲ್ಲಿ ಮಂಗಗಳ ಕಾಟ ಹೆಚ್ಚಾಗಿದೆ. ಅಷ್ಟೇ ಅಲ್ಲ ಮಂಗಗಳ ಕಾಟಕ್ಕೆ ಗ್ರಾಮದ ಹಲವರು ಗಾಯಗೊಂಡಿದ್ದಾರೆ. ನಿತ್ಯದ ಕೆಲಸಗಳನ್ನು ಮಾಡಿಕೊಳ್ಳೋದಕ್ಕೂ ಮಂಗ ಕಾಟ ಕೊಡುತ್ತಿವೆ. 30ಕ್ಕೂ ಹೆಚ್ವು ಜನರು ಆಸ್ಪತ್ರೆ ಸೇರಿದ್ದಾರೆ. ಹೀಗಾಗಿ ಮಂಗಗಳನ್ನ ಓಡಿಸದೆ ಹೋದರೆ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.